Connect with us

Dvgsuddi Kannada | online news portal | Kannada news online

ನಾಳೆಯಿಂದಲೇ ದಾವಣಗೆರೆ-ಹರಿಹರದಿಂದ ಜೋಗ, ಶಿರಸಿಗೆ KSRTC ವಿಶೇಷ ಬಸ್ ಪ್ಯಾಕೇಜ್ ಸೇವೆ ಶುರು

IMG 20220716 131519

ದಾವಣಗೆರೆ

ನಾಳೆಯಿಂದಲೇ ದಾವಣಗೆರೆ-ಹರಿಹರದಿಂದ ಜೋಗ, ಶಿರಸಿಗೆ KSRTC ವಿಶೇಷ ಬಸ್ ಪ್ಯಾಕೇಜ್ ಸೇವೆ ಶುರು

ದಾವಣಗೆರೆ: ಪ್ರತಿ ವರ್ಷದಂತೆ ಈ ವರ್ಷದಲ್ಲಿಯೂ ಜುಲೈ 17 ರಿಂದ ಪ್ರತಿ ಭಾನುವಾರ ಅಥವಾ ರಜಾ ದಿನಗಳಂದು ದಾವಣಗೆರೆ ಮತ್ತು ಹರಿಹರದಿಂದ ಶಿರಸಿ ಹಾಗೂ ವಿಶ್ವವಿಖ್ಯಾತ ಪ್ರೇಕ್ಷಣಿಯ ಸ್ಥಳವಾದ ಜೋಗಫಾಲ್ಸ್‍ಗೆ ವಿಶೇಷ ಪ್ಯಾಕೇಜ್ ಸಾರಿಗೆ ವ್ಯವಸ್ಥೆ ಅಡಿಯಲ್ಲಿ ಪ್ರವಾಸ ಕೈಗೊಳ್ಳಲು ರಾಜಹಂಸ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ಸಮಯ ಹಾಗೂ ಪ್ರಯಾಣ ದರದ ವಿವರ ಇಂತಿವೆ: ಬೆ.07 ಗಂಟೆಗೆ ದಾವಣಗೆರೆ ಶಿರಸಿ ಮಾರ್ಗವಾಗಿ ಜೋಗಫಾಲ್ಸ್‍ಗೆ ತಲುಪುವರು. ಮ.12 ಗಂಟೆಗೆ ಶಿರಸಿ ಯಿಂದ ಜೋಗ, ಸಂ.4.30ಕ್ಕೆ ಜೋಗ ದಿಂದ ದಾವಣಗೆರೆ ನೇರವಾಗಿ ಆಗಮಿಸಲಿದೆ. ಪ್ರಯಾಣಿಕರ ದರ ರೂ.600/- ಮಕ್ಕಳಿಗೆ ರೂ.450/-(2 ಬದಿ ಸೇರಿ).

ಹಾಗೂ ಬೆ.7.30ಕ್ಕೆ ಹರಿಹರದಿಂದ ಶಿರಸಿಗೆ, ಮ.12.30ಕ್ಕೆ ಶಿರಸಿ ಯಿಂದ ಜೋಗಕ್ಕೆ, ಸಂ.4.30ಕ್ಕೆ ಜೋಗದಿಂದ ಹರಿಹರಕ್ಕೆ ಬರುವ ವ್ಯವಸ್ಥೆ ಇದ್ದು, ನೇರ ಪ್ರಯಾಣಿಕರ ದರ ರೂ.575/- ಹಾಗೂ ಮಕ್ಕಳಿಗೆ ರೂ.430/- ಇರುತ್ತದೆ ಎಂದು ಕ.ರಾ.ರ.ಸಾ.ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top