ದಾವಣಗೆರೆ: ಆರನೇ ವೇತನ ಆಯೋಗದ ಅನ್ವಯ ಸಾರಿಗೆ ನೌಕರರ ವೇತನ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ರಾಜ್ಯದಾದ್ಯಂತ ನಡೆಯುತ್ತಿರುವ ಹೋರಾಟ ಆರನೇ ದಿನಕ್ಕೆ ಮುಂದುವರೆದಿದೆ. ಇಂದು ಜಿಲ್ಲಾ ಮಟ್ಟದಲ್ಲಿ ನೌಕರರ ಕುಟುಂಬಸ್ಥರು ಮಕ್ಕಳೊಂದಿಗೆ ಬಂದು ತಟ್ಟೆ ಬಾರಿಸುವ ಮೂಲಕ ಪ್ರತಿಭಟನೆ ನಡೆಸಿದರು. ದಾವಣಗೆರೆಯಲ್ಲಿಯೂ ಸಾರಿಗೆ ನೌಕರರ ಮಕ್ಕಳು ತಟ್ಟೆ ಬಾರಿಸುವ ಸರ್ಕಾರಕ್ಕೆ ವೇತನ ಹೆಚ್ಚಳಕ್ಕೆ ಆಗ್ರಹಿಸಿದರು.
ಈ ವೇಳೆ ಆರನೇ ವೇತನ ಆಯೋಗ ಅನ್ವಯ ಸಂಬಳ ಹೆಚ್ಚಿಸುವಂತೆ ಜಿಲ್ಲಾಧಿಕಾರಿ ಮುಖೇನ ಮುಖ್ಯಂತ್ರಿಗಳಿಗೆ ಮನವಿ ಸಲ್ಲಿಸಿದರು. ಸರ್ಕಾರ ಮಾತು ಕೊಟ್ಟಂತೆ ಸರ್ಕಾರಿ ನೌಕರರನ್ನಾಗಿ ಪರಿಗಣಿಸುವುದು ಹೊರತು ಪಡಿಸಿ ಉಳಿದ ಬೇಡಿಕೆ ಈಡೇರಿಸಬೇಕು. ಆರನೇ ವೇತನ ಆಯೋಗದ ಅನ್ವಯ ವೇತನ ಹೆಚ್ಚಳ ಮಾಡುವುದಾಗಿ ಸಾರಿಗೆ ಸಚಿವರು ಭರವಸೆ ನೀಡಿದ್ದರು. ಹೀಗಾಗಿ ಸರ್ಕಾರ ವೇತನ ಹೆಚ್ಚಿಸಬೇಕು. ನಮ್ಮ ತಂದೆ-ತಾಯಿಗೆ ಶಾಲೆ ಫೀಸ್ ಕಟ್ಟಲು ಹಣವಿಲ್ಲ. ಸರ್ಕಾರ ವೇತನ ಹೆಚ್ಚಳ ಮಾಡಿ ನಮ್ಮ ಕಷ್ಟಗಳಿಗೆ ಸ್ಪಂದಿಸಬೇಕು ಎಂದು ಪ್ರತಿಭಟನ ನಿರತ ಮಕ್ಕಳು ಆಗ್ರಹಿಸಿದ್ರು.