ದಾವಣಗೆರೆ: 6ನೇ ವೇತನ ಆಯೋಗ ಜಾರಿ ಮತ್ತು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕೆಂದು ಸಾರಿಗೆ ನೌಕರರು ನಡೆಸುತ್ತಿರುವ ಪ್ರತಿಭಟನೆಗೆ ದಾವಣಗೆರೆಯಲ್ಲಿ ಸಂಪೂರ್ಣವಾಗಿ ಬೆಂಬಲ ವ್ಯಕ್ತವಾಗಿದ್ದು, ದಾವಣಗೆರೆ ಡಿಪೋದಿಂದ ಒಂದೇ ಒಂದು ಬಸ್ ರಸ್ತೆಗೆ ಇಳಿಯಲಿಲ್ಲ.
ದಾವಣಗೆರೆಯಲ್ಲಿ ಬೆಳಗ್ಗೆಯಿಂದಲೇ ಕೆಎಸ್ ಆರ್ಟಿಸಿ ಬಸ್ ಗಳು ರಸ್ತೆಗೆ ಇಳಿಯದಿದ್ದರಿಂದ ಪ್ರಯಾಣಿಕರು ಪರದಾಟ ನಡೆಸಿದರು. ಸರ್ಕಾರಿ ಬಸ್ ಗಳಿಗೆ ಪರ್ಯಾಯವಾಗಿ ಖಾಸಗಿ ಬಸ್ ಗಳಿಗೆ ಸರ್ಕಾರ ಅವಕಾಶ ನೀಡಿದ್ದರಿಂದ ಸರ್ಕಾರಿ ಬಸ್ ನಿಲ್ದಾಣಕ್ಕೆ ಖಾಸಗಿ ಬಸ್ ಗಳು ಎಂಟ್ರಿ ಕೊಟ್ಟಿದ್ದವು. ಸರ್ಕಾರಿ ಬಸ್ ಗಳಿಲ್ಲದೆ ಪ್ರಯಾಣಿಕರು ತುಂಬಾ ತೊಂದರೆ ಅನುಭವಿಸುವಂತಾಗಿತ್ತು. ಕಾಲೇಜು ವಿದ್ಯಾರ್ಥಿಗಳು, ವಿವಿಧ ನೌಕರರು, ಸಾರ್ವಜನಿಕರು ಪರದಾಟ ನಡೆಸಿದರು.
ಸರ್ಕಾರ ಯಾವುದೇ ಕಾರಣಕ್ಕೂ ಈಗಿನ ಪರಿಸ್ಥಿತಿಯಲ್ಲಿ 6ನೇ ವೇತನ ಆಯೋಗ ಜಾರಿ ಮಾಡಲು ಸಾಧ್ಯವಿಲ್ಲ, ಈಗ ಎಲೆಕ್ಷನ್ ಕೋಡ್ ಆಫ್ ಕಂಡೆಕ್ಟ್ ಇರುವುದರಿಂದ ಸ್ವಲ್ಪ ಸಮಯಾವಕಾಶ ನೀಡುವಂತೆ ನೌರರನು ಕೇಳಿಕೊಂಡಿತ್ತು. ಸರ್ಕಾರ ನಿರ್ಧಾರ ಧಿಕ್ಕರಿಸಿ ಸಾರಿಗೆ ನೌಕರರು ನಿನ್ನೆಯಿಂದಲೇ ಪ್ರತಿಭಟನೆ ಮುಂದಾಗಿದ್ದರು. ಇದಕ್ಕೆ ಸರ್ಕಾರ ಪರ್ಯಾಯ ಮಾರ್ಗವಾಗಿ ಖಾಸಗಿ ಬಸ್ ಗಳಿಗೆ ಆರ್ ಟಿಒ ಇಲಾಖೆಯಿಂದ ಅನುಮತಿ ನೀಡಿ, ಓಡಿಸಲು ತೀರ್ಮಾನಿಸಿತ್ತು.
ದಾವಣಗೆರೆಯಲ್ಲಿ ನಿನ್ನೆಯಿಂದಲೇ ಶೇ 20 ನೌಕರರು ಕೆಲಸಕ್ಕೆ ಹಾಜರಾಗಿರಲಿಲ್ಲ. ಇಂದು ಪ್ರತಿಭಟನೆಗೆ ಸಂಪೂರ್ಣವಾಗಿ ಬೆಂಬಲ ಸೂಚಿಸಿದ್ದು, ಯಾರೊಬ್ಬರು ಬಸ್ ಡಿಪೋ ಗಳತ್ತ ಸುಳಿದಿಲ್ಲ. ದಾವಣಗೆರೆ ವಿಭಾಗದಲ್ಲಿ ದಾವಣಗೆರೆ-1,ದಾವಣಗೆರೆ -2 ಹಾಗೂ ಹರಿಹರ ಡಿಪೋ ಪಳಗೊಂಡಿದ್ದು, ಒಟ್ಟು 1135 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಒಟ್ಟು 350 ಬಸ್ ಗಳಿದ್ದು, ಇಂದು ಯಾವುದೇ ಬಸ್ ಗಳು ಡಿಪೋದಿಂದ ಹೊರಗೆ ಹೋಗಿಲ್ಲ. ಇನ್ನು ಹೊರಗಡೆಯಿಂದ ಯಾವುದೇ ಬಸ್ ಗಳು ದಾವಣಗೆರೆ ವಿಭಾಗಕ್ಕೆ ಬಂದಿಲ್ಲ. ದಾವಣಗೆರೆ ವಿಬಾಗದಿಂದ ಒಂದು ದಿನಕ್ಕೆ 35 ಲಕ್ಷ ಆದಾಯ ನಷ್ಟ ಆಗಿದೆ. ಗೈರು ಹಾಜರಾದ ನೌಕರರ ಈ ದಿನದ ವೇತನ ಕಟ್ ಮಾಡಲಾಗುವುದು ಎಂದು ದಾವಣಗೆರೆ ಕೆಎಸ್ ಆರ್ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ ಎನ್. ಹೆಬ್ಬಾಳ್ ಡಿವಿಜಿ ಸುದ್ದಿಗೆ ತಿಳಿಸಿದ್ದಾರೆ.