ದಾವಣಗೆರೆ: ದಾವಣಗೆರೆ, ಹರಿಹರ ಕೆಎಸ್ ಆರ್ ಟಿಸಿ ವಿಭಾಗದಿಂದ ಜೋಗ ಫಾಲ್ಸ್ ಮತ್ತು ಶಿರಸಿಯ ಮಾರಿಕಾಂಭ ದೇವಿ ದರ್ಶನಕ್ಕೆ ವಿಶೇಷ ರಾಜಹಂಸ ಬಸ್ ಸೇವೆ ಜು.17 ರಿಂದ ಆರಂಭವಾಗಲಿದೆ.
ಈ ಸೇವೆ ಪ್ರತಿ ವಾರಂತ್ಯದಲ್ಲಿ ಲಭ್ಯವಿರಲಿದ್ದು, ಜೋಗ ಫಾಲ್ಸ್ ವೀಕ್ಷಣೆಗೆ ಹೋಗುವರು ಈ ಸೇವೆ ಸದುಪಯೋಗ ಪಡೆದುಕೊಳ್ಳಬಹುದು. ದಾವಣಗೆರೆಯಿಂದ ಬೆಳಗ್ಗೆ 7 ಗಂಟೆಗೆ ಹೊರಟು 10 .30ಕ್ಕೆ ಶಿರಸಿ ತಲುಪಿ, ಮಾರಿಕಂಭ ದೇವಿ ದರ್ಶನ ಪಡೆದು 12 ಗಂಟೆಗೆ ಅಲ್ಲಿಂದ ಬಿಟ್ಟು 1.30 ಕ್ಕೆ ಜೊಗ ಫಾಲ್ಸ್ ತಲುಪಲಾಗುವುದು. ನಂತರ ಸಂಜೆ 4 ಗಂಟೆಗೆ ಜೋಗದಿಂದ ಬಿಟ್ಟು ರಾತ್ರಿ 8 ಗಂಟೆಗೆ ದಾವಣಗೆರೆ ತಲುಪಲಾಗುವುದು. ದಾವಣಗೆರೆಯಿಂದ ವಯಸ್ಕರಿಗೆ 600 (ಎರಡು ಬದಿಸೇರಿ), ಮಕ್ಕಳಿಗೆ 450 ದರ ನಿಗದಿ ಮಾಡಲಾಗಿದೆ.
ಇನ್ನು ಹರಿಹರದಿಂದ ಬೆಳಗ್ಗೆ 7.30 ಹೊರಟು ಸಂಜೆ 7.30ಕ್ಕೆ ವಾಪಸ್ ಬರಲಾಗುವುದು. ಹರಿಹರಿಂದ ವಯಸ್ಕರಿಗೆ 575 ಹಾಗೂ ಮಕ್ಕಳಿಗೆ 430 ದರ ನಿಗದಿ ಮಾಡಲಾಗಿದೆ. ಇನ್ನು ಮುಂಗಡ ಬುಕ್ಕಿಂಗ್ ಗೆ ಅವಕಾಶ ಕಲ್ಪಿಸಲಾಗಿದ್ದು, ಇಲಾಖೆ ವೆಬ್ ಸೈಟ್ www.Ksrtc.in ನಲ್ಲಿ ಬುಕ್ಕಿಂಗ್ ಮಾಡಬಹುದಾಗಿದೆ. ಹರಿಹರ, ದಾವಣಗೆರೆ ಪ್ರವಾಸಿಗರು ಈ ವಿಶೇಷ ಪ್ಯಾಕೇಜ್ ಸೌಲಭ್ಯ ಪಡೆದುಕೊಳ್ಳಬಹುದು ಎಂದು ವಿಭಾಗೀಯ ನಿರ್ದೇಶಕರು ತಿಳಿಸಿದ್ದಾರೆ.



