ದಾವಣಗೆರೆ: ಜಿಲ್ಲೆಯ ಹರಿಹರ ತಾಲ್ಲೂಕಿನ ಕೊಂಡಜ್ಜಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ಜನಸಂಖ್ಯೆ ದಿನಾಚರಣೆಯನ್ನು (World Population Day) ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ. ವೈದ್ಯಧಿಕಾರಿ ಡಾಕ್ಟರ್ ಶಿವಪ್ರಕಾಶ್ ಮಾತನಾಡಿ, 1987 ಜುಲೈ 11 ರಂದು ವಿಶ್ವ ಜನಸಂಖ್ಯೆ 500ಕೋಟಿ ಮುಟ್ಟಿದ ದಿನದ ಜ್ಞಾಪಕಾರ್ತವಾಗಿ ಪ್ರತಿ ವರ್ಷ ಜುಲೈ 11ರಂದು ವಿಶ್ವ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಭಾರತದಲ್ಲಿ ಪ್ರತಿ 1ಸೆಕೆಂಡಿಗೆ 2ಮಕ್ಕಳು, ಒಂದು ದಿನಕ್ಕೆ ಎಂಬತ್ತು ಸಾವಿರ ಮಕ್ಕಳು ಜನಿಸುತ್ತಿವೆ. ಹೀಗೆಯೇ ಮುಂದುವರೆದ್ರ ಜನಸಂಖ್ಯೆ ಸ್ಫೋಟವಾಗಲಿದೆ. ಇದಲ್ಲದೆ, ಜೈವಿಕ ಸಂಪನ್ಮೂಲಗಳಾದ ಗಾಳಿ, ನೀರು, ಆಹಾರ, ವಾಸ ಸ್ಥಳ, ವಿದ್ಯುತ್, ಅರೋಗ್ಯ ಸೇವೆಗಳು, ಉದ್ಯೋಗ, ಶಿಕ್ಷಣ, ಎಲ್ಲವೂ ವ್ಯತ್ಯಯವಾಗುತ್ತದೆ ಎಂದು ತಿಳಿಸಿದರು.
ಮುಂದುವರೆದು ಆರ್ಥಿಕ ಅಸಾಮಾನತೆಯಿಂದ ಅಪಾಯ ಕಟ್ಟಿಟ್ಟ ಬುತ್ತಿ. ಜನಸಂಖ್ಯೆ ಒತ್ತಡದಿಂದ ನೈಸರ್ಗಿಕ ಸಂಪತ್ತಿನ ದುರ್ಬಳಕೆ, ಕಸದ ಸಮಸ್ಯೆ, ವಾಯು, ಜಲ ಮಾಲಿನ್ಯ, ಅರಣ್ಯ ನಾಶ ಜಾಸ್ತಿಯಾಗಿ ಜಾಗತಿಕ ತಾಪಮಾನದ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಜನ ಸಂಖ್ಯೆ ಸ್ಫೋಟವನ್ನು ತಡೆಯಲು ನಾವು ಜಾಣತನದಿಂದ ಕುಟುಂಬ ಕಲ್ಯಾಣ ವಿಧಾನಗಳನ್ನು ಅಳವಡಿಸಿ ಕೊಳ್ಳುವಂತೆ ಸವಿಸ್ತಾರವಾಗಿ ಸಾಧಕ ಭಾಧಕಗಳನ್ನು ವಿವರಿಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆ ಸಿಬ್ಬಂದಿ, ಗ್ರಾಮಸ್ಥರು ಇದ್ದರು.



