Connect with us

Dvgsuddi Kannada | online news portal | Kannada news online

ದಾವಣಗೆರೆ: ಕೊಂಡಜ್ಜಿ ಪೊಲೀಸ್ ಪಬ್ಲಿಕ್ ಶಾಲೆಗೆ ನುರಿತ ಶಿಕ್ಷಕರ ಭರ್ತಿಗೆ ಅರ್ಜಿ ಆಹ್ವಾನ

ದಾವಣಗೆರೆ

ದಾವಣಗೆರೆ: ಕೊಂಡಜ್ಜಿ ಪೊಲೀಸ್ ಪಬ್ಲಿಕ್ ಶಾಲೆಗೆ ನುರಿತ ಶಿಕ್ಷಕರ ಭರ್ತಿಗೆ ಅರ್ಜಿ ಆಹ್ವಾನ

ದಾವಣಗೆರೆ:  ಜಿಲ್ಲೆಯ ಕೊಂಡಜ್ಜಿಯಲ್ಲಿರುವ ಪೊಲೀಸ್ ಪಬ್ಲಿಕ್ ಶಾಲೆಗೆ ನುರಿತ ಸ್ನಾತಕೋತ್ತರ ಹಾಗೂ ಸ್ನಾತಕ ಶಿಕ್ಷಕರನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ತಿಳಿಸಿದ್ದಾರೆ.

ದಾವಣಗೆರೆ:‌ ಮೊಟ್ಟೆ ಎಸೆತ, ಒತ್ತಾಯ ಪೂರ್ವಕ ಬಣ್ಣ ಎರಚುವವರ ವಿರುದ್ಧ ಕಾನೂನು ಕ್ರಮ ಎಚ್ಚರಿಕೆ ನೀಡಿದ ಪೊಲೀಸ್ ಇಲಾಖೆ

ಈ ಶಾಲೆ ಕರ್ನಾಟಕ ರಾಜ್ಯ ಪೊಲೀಸ್ ಕಲ್ಯಾಣ, ಶಿಕ್ಷಣ ಟ್ರಸ್ಟ್, ಪೂರ್ವ ವಲಯ ದಾವಣಗೆರೆ ವತಿಯಿಂದ ಪೊಲೀಸ್ ಪಬ್ಲಿಕ್ ಸ್ಕೂಲ್  ಸಿಬಿಎಸ್‍ಇ (Central Board of Secondary Education)  ಪಠ್ಯಕ್ರಮದ ಶಾಲೆ ನಡೆಸಲಾಗುತ್ತಿದೆ. ಪೊಲೀಸ್ ಅಧಿಕಾರಿ, ಸಿಬ್ಬಂದಿಗಳ ಮಕ್ಕಳು ಹಾಗೂ ಇತರೆ ಸಾರ್ವಜನಿಕ ಮಕ್ಕಳಿಗೆ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ.

ದಾವಣಗೆರೆ: ಬೃಹತ್ ಉದ್ಯೋಗ ಮೇಳ, 50 ಕ್ಕೂ ಹೆಚ್ಚು ಕಂಪನಿಗಳು ಭಾಗಿ, ಈ ಲಿಂಕ್ ಮೂಲಕ ಹೆಸರು ನೋಂದಣಿ ಮಾಡಿ

ಅಗತ್ಯ ಶಿಕ್ಷಕರ‌ ಸಂಖ್ಯೆ ಮತ್ತ ಅರ್ಹತೆ ವಿವರ: ಪಿಜಿಟಿ ಇಂಗ್ಲೀಷ್ ಶಿಕ್ಷಕರ 1 ಹುದ್ದೆಗೆ ಎಂಎ.ಬಿ.ಇಡಿ, ಪಿಜಿಟಿ ಗಣಿತ ಶಿಕ್ಷಕರ 1 ಹುದ್ದೆಗೆ ಎಂ.ಎಸ್ಸಿ, ಬಿ.ಇಡಿ, ಪಿಜಿಟಿ ವಿಜ್ಞಾನ ಶಿಕ್ಷಕರ 2 ಹುದ್ದೆಗಳಿಗೆ ಎಂಎಸ್ಸಿ, ಬಿಇಡಿ ಸಿಬಿಝಡ್, ಟಿಜಿಟಿ ಸಮಾಜ ವಿಜ್ಞಾನ 1 ಹುದ್ದೆಗೆ ಎಂ.ಎ. ಬಿ.ಇಡಿ, ಕನ್ನಡ ಪಿಜಿಟಿ 1 ಹುದ್ದೆಗೆ ಎಂಎ, ಬಿ.ಇಡಿ, ಹಿಂದಿ 2 ಹುದ್ದೆ ಬಿ.ಎ, ಎಂ.ಎ ಬಿ.ಇಡಿ, ದೈಹಿಕ ಶಿಕ್ಷಕ 1 ಹುದ್ದೆ ಬಿಪಿಇಡಿ, ಎಂ.ಪಿ.ಇಡಿ, ಕಂಪ್ಯೂಟರ್ ಸೈನ್ಸ್ 1 ಬಿಸಿಎ, ಬಿ.ಟೆಕ್, ಬಿ.ಎಸ್ಸಿ ಕಂಪ್ಯೂಟರ್ ವಿದ್ಯಾರ್ಹತೆ, ಕಚೇರಿ ಸಿಬ್ಬಂದಿ 1 ಹುದ್ದೆಗೆ ಯಾವುದೇ ಪದವಿ ಜೊತೆಗೆ ಕಂಪ್ಯೂಟರ್ ತರಬೇತಿ ಹೊಂದಿರಬೇಕು. ಈ ಹುದ್ದೆಗಳಿಗೆ ಇಂಗ್ಲೀಷ್ ಜ್ಞಾನವುಳ್ಳವರಾಗಿದ್ದು ಸಂವಹನ ಹಾಗೂ ಬರವಣಿಗೆಯಲ್ಲಿ ಉತ್ತಮ ಕೌಶಲ್ಯತೆ ಹೊಂದಿರಬೇಕು. ನಿಯಮಾವಳಿ ರೀತ್ಯ ವೇತನ ಜೊತೆಗೆ ಇಪಿಎಫ್, ಇಎಸ್‍ಐ ಸೌಲಭ್ಯವಿರುತ್ತದೆ.

ಆಸಕ್ತರು ತಮ್ಮ ಸ್ವವಿವರದ ದಾಖಲೆಗಳನ್ನು ಪೊಲೀಸ್ ಪಬ್ಲಿಕ್ ಸ್ಕೂಲ್, ಕೊಂಡಜ್ಜಿಗೆ ಅಥವಾ ಮೇಲ್; pprsdavanagere@ksp.gov.in ಕಳುಹಿಸಲು ಹಾಗೂ ಹೆಚ್ಚಿನ ಮಾಹಿತಿಗೆ 9164633833, 9743936234 ಕರೆ ಮಾಡಲು ತಿಳಿಸಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top