ದಾವಣಗೆರೆ; ಕರಿಯಮ್ಮ ದೇವರಿಗೆ ಬಿಟ್ಟಿದ್ದ ಕೋಣ, ಅದೇ ದೇವಸ್ಥಾನದ ಪೂಜಾರಿಗೆ ಗುದ್ದಿದೆ. ಕೋಣ ಗುದ್ದಿದ ರಭಸಕ್ಕೆ ಪೂಜಾರಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಜಿಲ್ಲಾಯ ಹೊನ್ನಾಳಿ ತಾಲ್ಲೂಕಿನ ಬಳ್ಳಾಪುರ ಗ್ರಾಮದಲ್ಲಿ ನಡೆದಿದೆ.
ಬಳ್ಳಾಪುರ ಗ್ರಾಮದ ತಿಮ್ಮಪ್ಪ ಊರಿನ ಕರಿಯಮ್ಮ ದೇವಸ್ಥಾನ ಪೂಜಾರಿಯಾಗಿದ್ದರು. ಬೆಳಗ್ಗೆ ದೇವಸ್ಥಾನ ಪೂಜೆ ಮುಗಿಸಿಕೊಂಡು ಮನೆಗೆ ಬಂದು ಊಟ ಮಾಡಿ, ನಂತರ ಮಧ್ಯಾಹ್ನ ಅಡಿಕೆ ತೋಟಕ್ಕೆ ಹೋಗುದ್ದಾಗ ಈ ಘಟನೆ ನಡೆದಿದೆ. ತೋಟದಲ್ಲಿಯೇ ಇದ್ದ ಕೋಣ ಪೂಜಾರಿ ತಿಮ್ಮಪ್ಪ ನೋಡಿದ ತಕ್ಷಣ ಅಟ್ಟಾಡಿಸಿಕೊಂಡು ಹೋಗಿ ಕೊಂಬಿನಿಂದ ತಿವಿದಿದೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ತಿಮ್ಮಪ್ಪ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಇತ್ತೀಚೆಗೆ ಬಿಳಿ ಬಟ್ಟೆ ಹಾಕಿಕೊಂಡು ಬಂದವರ ಮೇಲೆ ಕೋಣ ದಾಳಿ ಮಾಡುತ್ತಿತ್ತು ಎನ್ನಲಾಗಿದೆ. ಆದರೆ, ಸಾಯುವ ಮಟ್ಟಿಗೆ ದಾಳಿ ಮಾಡಿರಲಿಲ್ಲ. ಈ ಬಗ್ಗೆ ಗ್ರಾಮಸ್ಥರು ಕೋಣಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.



