ದಾವಣಗೆರೆ: ಮೇ 09 ರಂದು ನಡೆಯಲಿರುವ ದಾವಣಗೆರೆ ಜಿಲ್ಲಾ ಕಸಾಪ ಚುನಾವಣೆಯ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಕನ್ನಡದ ಕಟ್ಟಾಳು, ಕನ್ನಡ ಪರಿಚಾರಕ ಬಿ.ವಾಮದೇವಪ್ಪ ಅವರು ಇಂದು (ಮಾ.29) ನಾಮಪತ್ರ ಸಲ್ಲಿಸಿದರು. ದಾವಣಗೆರೆ ಜಿಲ್ಲಾ ಚುನಾವಣಾಧಿಕಾರಿ ದಾವಣಗೆರೆ ತಹಶೀಲ್ದಾರ್ ಅವರ ಕಚೇರಿಯಲ್ಲಿ ಅಪಾರ ಕನ್ನಡ ಅಭಿಮಾನಿಗಳ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು.
ಬಿ.ವಾಮದೇವಪ್ಪನವರು ಕಳೆದ ಮೂರು ದಶಕಗಳಿಂದಲೂ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಕ್ರಿಯ ಸದಸ್ಯರಾಗಿ, ತಾಲ್ಲೂಕು ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಈ ಅವಧಿಯಲ್ಲಿ ತಾಯಿ ಕನ್ನಡ ಭುವನೇಶ್ವರಿ ರಥವನ್ನು ಕೇವಲ ನಗರ ಪ್ರದೇಶಕ್ಕಷ್ಟೇ ಸೀಮಿತಗೊಳಿಸದೇ ದಾವಣಗೆರೆಯ ಗ್ರಾಮೀಣ ಪ್ರದೇಶದ ಹಳ್ಳಿ ಹಳ್ಳಿಗೂ ಎಳೆದೊಯ್ದ ಕೀರ್ತಿ ಇವರದ್ದಾಗಿದೆ.
ಕನ್ನಡ ಭವನ ನಿರ್ಮಾಣದಲ್ಲಿ ಅವಿರತವಾಗಿ ಶ್ರಮಿಸಿರುವ ಇವರು ಕನ್ನಡ ನಾಡು ನುಡಿ ಕಟ್ಟುವಲ್ಲಿ ಅತ್ಯಂತ ಬದ್ಧತೆ ಮೆರೆದಿದ್ದಾರೆ.
ಇಂತಹವರು ದಾವಣಗೆರೆ ಜಿಲ್ಲಾ ಕಸಾಪ ದ ಅಧ್ಯಕ್ಷ ಸ್ಥಾನ ಅಲಂಕರಿಸಿ ಜಿಲ್ಲೆಯದ್ಯಾಂತ ಕನ್ನಡ ಕಟ್ಟುವ ಕೆಲಸಕ್ಕೆ ಮುಂದಾಗಬೇಕೆಂಬ ಹಲವಾರು ಹಿತೈಷಿಗಳು, ಸ್ನೇಹಿತರು, ಬಂಧುಗಳು ಹಾಗೂ ಕನ್ನಡಾಭಿಮಾನಿಗಳ ಒತ್ತಾಸೆಯಿಂದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸ ಬಯಸಿ ಇಂದು ತಮ್ಮ ಗುರು ಹಿರಿಯರು ಹಾಗೂ ನೂರಾರು ಬೆಂಬಲಿಗ ಕನ್ನಡಾಭಿಮಾನಿಗಳ ಸಮ್ಮಖದಲ್ಲಿ ನಾಮಪತ್ರ ಸಲ್ಲಿಕೆಗೆ ಸಾಥ್ ನೀಡಿದರು.

ನಾಮಪತ್ರ ಸಲ್ಲಿಸಿದ ನಂತರ ಮೆರವಣಿಗೆ ಮೂಲಕ ಅಪೂರ್ವ ಹೋಟೆಲ್ ಸಭಾಂಗಣಕ್ಕೆ ಆಗಮಿಸಿ ಅಲ್ಲಿ ತಮ್ಮ ಹಿತೈಷಿಗಳು ಹಾಗೂ ಅಭಿಮಾನಿ ಬೆಂಬಲಿಗರ ಸಭೆ ಆಯೋಜಿಸಲಾಯಿತು. ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಹಾಗೂ ಆಜೀವ ಸದಸ್ಯರ ಸಭೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪ್ರೊ. ಎಸ್.ಬಿ.ರಂಗನಾಥ್, ಹಿರಿಯ ಸಾಹಿತಿಗಳು ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎಸ್.ಟಿ.ಶಾಂತಗಂಗಾಧರ್, ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಬಿ.ಎಮ್.
ಸದಾಶಿವಪ್ಪ ಶ್ಯಾಗಲೆ, ವಿಶ್ರಾಂತ ಉಪನ್ಯಾಸಕರಾದ ಸುಭಾಸ್ ಚಂದ್ರ ಭೋಸ್, ಶರಣ ಸಾಹಿತಿಗಳಾದ ಎಮ್.ಕೆ.ಬಕ್ಕಪ್ಪ, ಶಿಕ್ಷಣ ತಜ್ಞರಾದ ಡಾ. ಹೆಚ್.ವಿ.ವಾಮದೇವಪ್ಪ, ಉಪನ್ಯಾಸಕಿ ಸುಮತಿ ಜಯಪ್ಪ, ಬಸವಾಪಟ್ಟಣ ಎನ್.ವಿ.ರಮೇಶ್, ಕಲಾಕುಂಚ ಸಂಸ್ಥಾಪಕ ಸಾಲಿಗ್ರಾಮ ಗಣೇಶ ಶಣೈ, ಹೊನ್ನಾಳಿ ಮುರಿಗೆಪ್ಪ ಗೌಡ, ಸಂತೆಬೆನ್ನೂರು ಕೆ ಸಿರಾಜ್ ಅಹಮದ್, ಹೋಟೆಲ್ ಉದ್ಯಮಿಗಳಾದ ಮಲ್ಯಾಡಿ ಪ್ರಭಾಕರ ಶೆಟ್ಟಿ, ಉಪ್ಪುಂದ ಕುಶಾಲ್ ಶೆಟ್ಟಿ, ಎಲ್.ನಾಗರಾಜ್, ಸರಕಾರಿ ನೌಕರರ ಗೃಹ ನಿರ್ಮಾಣ ಸಂಘದ ಅಧ್ಯಕ್ಷ ಎಮ್.ಡಿ.ನೀಲಗಿರಿಯಪ್ಪ, ಕಿರಣ್ ಕುಮಾರ್ ಸಂತೆಬೆನ್ನೂರು, ವೀರೇಶ್ ಪ್ರಸಾದ್, ಗೋವಿಂದಪ್ಪ ಹೊನ್ನಾಳಿ, ಕೆನರಾ ಬ್ಯಾಂಕ್ ಕೆ.ರಾಘವೇಂದ್ರ ನಾಯರಿ, ಸಿ.ಜಿ. ಜಗದೀಶ ಕೂಲಂಬಿ, ಮುರುಗೇಶ್ ಹೆದ್ನೆ, ಹೆಚ್.ಜಯಣ್ಣ, ಕಾಕನೂರು ಎಮ್.ಬಿ. ನಾಗರಾಜ್, ಕೊರಟಗೆರೆ ಡಿ.ಎಮ್.ಶಿವಕುಮಾರ್, ಬಸವಾಪಟ್ಟಣ ಎಲ್.ಜಿ. ಮಧುಕುಮಾರ್, ಕೆ.ಹೆಚ್.ಮಂಜುನಾಥ್, ಕೆ.ಚಂದ್ರಣ್ಣ, ಬೇತೂರು ಷಡಾಕ್ಷರಪ್ಪ, ಗೋಪನಾಳ್ ಪಾಲಾಕ್ಷಪ್ಪ, ಬಿ.ಎಸ್.ಜಗದೀಶ್, ಅಜಾಜ್ ಅಹಮದ್, ಎಸ್ ಹೆಚ್ ಚಂದ್ರಪ್ಪ, ಜಗದೀಶ್ ಕಾಶಿಪುರ, ಕೆ. ಪಿ ಬಸವರಾಜಪ್ಪ, ಬಿ. ಕೆ. ರೇಣುಕಾಮೂರ್ತಿ, ಎಮ್.ಸಿ.ಪಾಟೀಲ್, ಎಂ. ವಿ ಶಕುಂತಲಮ್ಮ, ಎಂ ಆರ್ ಪತ್ತಾರ್, ನಾಗಭೂಷಣ್, ಬಿ.ಎಮ್.ಮುರಿಗೆಯ್ಯ ಕುರ್ಕಿ, ಕೊಗಲೂರು ಜಗದೀಶ್ ಗೌಡ್ರು, ಕಿತ್ತೂರು ಕೊಟ್ರಪ್ಪ, ವೀರಣ್ಣ ಗೌಡ್ರು, ಶಾಂತಪ್ಪ ಪೂಜಾರಿ, ಎಸ್. ಎಮ್.ಮಲ್ಲಮ್ಮ, ಆಶಾ ನಾವುಡ, ಜ್ಯೋತಿ ಗಣೇಶ್ ಶಣೈ, ಶೈಲಾ ವಿಜಯಕುಮಾರ್ ಶೆಟ್ಟಿ, ಎಲ್. ಎಚ್. ಹಾಲೇಶಪ್ಪ ಕೂಲಂಬಿ, ಸಿ ಜಿ ಸದಾಶಿವ, ಜಿ ಎಂ. ಬಸವರಾಜ್, ತಾರೇಶ್ ಪಲ್ಲಾಗಟ್ಟೆ ಶೇಖರಪ್ಪ ಮತ್ತಿತರರು ಉಪಸ್ಥಿತರಿದ್ದರು. ದಾವಣಗೆರೆ ಜಿಲ್ಲೆಯಾದ್ಯಂತದಿಂದ ನೂರಾರು ಸಂಖ್ಯೆಯಲ್ಲಿ ಕಸಾಪ ಆಜೀವ ಸದಸ್ಯರು ಉಪಸ್ಥಿತರಿದ್ದು ಬಿ.ವಾಮದೇವಪ್ಪ ಅವರಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.