ದಾವಣಗೆರೆ: 220 ಕೆ.ವಿ. ಸ್ವೀಕರಣಾ ಕೇಂದ್ರದಿಂದ ಸರಬರಾಜಾಗುವ ದಾವಣಗೆರೆ-ಚಿತ್ರದುರ್ಗ ಮಾರ್ಗದ ವಾಹಕವನ್ನು ತುರ್ತಾಗಿ ಬದಲಾಯಿಸುವ ಕಾರ್ಯ ಹಮ್ಮಿಕೊಂಡಿರುವುದರಿಂದ ಇಂದು (ಜ.02 ) ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಅತ್ತಿಗೆರೆ, ಆನಗೋಡು, ಮಾಯಕೊಂಡ, ಸಾಸಲಹಳ್ಳ, ಚಿಕ್ಕಜಾಜೂರು ಹಾಗೂ ಕುಟ್ಟಿಗೇಹಳ್ಳಿ ವಾಟರ್ ವರ್ಕ್ಸ್, ವಿದ್ಯುತ್ ವಿತರಣ ಕೇಂದ್ರಗಳಿಂದ ಸರಬರಾಜಾಗುವ ಎಲ್ಲಾ 11ಕೆ.ವಿ. ವಿದ್ಯುತ್ ಮಾರ್ಗಗಳಲ್ಲಿ ಬರುವ ದಾವಣಗೆರೆ ತಾಲೂಕಿನ ಅತ್ತಿಗೆರೆ, ಆನಗೋಡು, ಮಾಯಕೊಂಡ ವಿದ್ಯುತ್ ವಿತರಣ ಕೇಂದ್ರಗಳಿಂದ ಸರಬರಾಜಾಗುವ ಎಲ್ಲಾ ಗ್ರಾಮಗಳಲ್ಲಿ ಹಾಗೂ ಹೊಳಲ್ಕೆರೆ ತಾಲೂಕಿನ ಸಾಸಲಹಳ್ಳ, ಚಿಕ್ಕಜಾಜೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ಮತ್ತು ಕುಟ್ಟಿಗೇಹಳ್ಳಿ ವಾಟರ್ ವರ್ಕ್ಸ್ ಕೇಂದ್ರದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಬೆಸ್ಕಾಂ ಪ್ರಕಟಣೆ ತಿಳಿಸಿದೆ.