ದಾವಣಗೆರೆ: 7ನೇ ವೇತನ ಜಾರಿ, ಹಳೆ ಪಿಂಚಣಿ ಯೋಜನೆ ಮರು ಜಾರಿ, ಆರೋಗ್ಯ ಸಂಜೀವಿನಿ ಸೇರಿ ರಾಜ್ಯ ಸರ್ಕಾರಿ ನೌಕರರ ವಿವಿಧ ಬೇಡಿಕೆ ಈಡೇರಿಸಲು ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರಿಗೆ ಮನವಿ ಸಲ್ಲಿಸಲಿದ್ದು, ಇದಕ್ಕೆ ಮುಖ್ಯಮಂತ್ರಿಯವರು ಸ್ಪಂದಿಸದಿದ್ದರೆ ಉಗ್ರ ಹೋರಾಟಕ್ಕೆ ಸಂಘ ಕ್ರಮಕೈಗೊಳ್ಳಲಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ತಿಳಿಸಿದರು.
ದಾವಣಗೆರೆಯಲ್ಲಿ ಸಚಿವರು, ಶಾಸಕರಿಗೆ ಮನವಿ ಸಲ್ಲಿಸಲು ರಾಜ್ಯ ಸರ್ಕಾರಿ ನೌಕರರ ಸಂಘದಿಅಮದ ಆಯಾಇಜಿಸಿದ್ದ ಬೈಕ್ ಬ್ಯಾಲಿಗೆ ಚಾಲನೆ ನೀಡಿ ಮಾತನಾಡಿದರು. ಜುಲೈ 2022ರಲ್ಲೇ ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸು ಜಾರಿ ಆಗಬೇಕಿತ್ತು. ಶೇ.40ಮೂಲ ವೇತನ ಹೆಚ್ಚಿಸಬೇಕೆಂಬ ಬೇಡಿಕೆಗೆ ಸರ್ಕಾರ ಮಧ್ಯಂತರ ಪರಿಹಾರವಾಗಿ ಶೇ.17ರಷ್ಟು ಮಾತ್ರ ಹೆಚ್ಚಿಸಿದ್ದು, ಉಳಿದ ಶೇ.23ರಷ್ಟು ಹೆಚ್ಚಿಸಬೇಕು. 2006 ಏ.1ರನಂತರ ಸರ್ಕಾರಿ ಸೇವೆಗೆ ಸೇರ್ಪಡೆಯಾದವರ ಹಳೆ ಪಿಂಚಣಿ ವ್ಯವಸ್ಥೆಗೆ ಒಳಪಡಿಸಬೇಕೆಂಬುದುನಮ್ಮ ಬೇಡಿಕೆ.
ಈ ಬಗ್ಗೆ ಆರ್ಥಿಕ ಇಲಾಖೆ ಅಧಿಕಾರಿಗಳೊಂದಿಗೆ
ಚರ್ಚಿಸಿದ್ದು, 11,366 ನೌಕರರ ಹಳೆ ಪಿಂಚಣಿ ವ್ಯವಸ್ಥೆಗೆ ಒಳಪಡಿಸುವ ಕೆಲಸವಾಗಿದೆ ಎಂದರು.
ಕಾಂಗ್ರೆಸ್ ಪಕ್ಷವುಚುನಾವಣಾ ಪ್ರಣಾಳಿಕೆಯಲ್ಲೇ ಹಳೆ ಪಿಂಚಣಿ ವ್ಯವಸ್ಥೆಮರು ಜಾರಿ ಬಗ್ಗೆ ಭರವಸೆ ನೀಡಿತ್ತು.ಸರ್ಕಾರ ಎಲ್ಲಾ ಭಾಗ್ಯಗಳ ನೀಡಿದಂತೆ ಸರ್ಕಾರಿನೌಕರರಿಗೂ 7ನೇ ವೇತನ ಹಾಗೂ ಹಳೆ ಪಿಂಚಣಿ ವ್ಯವಸ್ಥೆಭಾಗ್ಯ ನೀಡಬೇಕು. ರಾಜ್ಯದಲ್ಲಿ ತೀವ್ರ ಬರ ಆವರಿಸಿದ್ದಾಗಲೇ ಸರ್ಕಾರಿ ನೌಕರರು ವೇತನ ಹೆಚ್ಚಳಕ್ಕೆ ಒತ್ತಾಯಿಸುತ್ತಿದ್ದಾರೆಂಬ ಸಾರ್ವಜನಿಕ ಆಕ್ಷೇಪ.ಒಂದು ವೇಳೆ ಸರ್ಕಾರ ನಿರೀಕ್ಷಿಸಿದರೆ ಸಂಘದಿಂದ ಬರ ಪರಿಹಾರ ನಿಧಿಗೆ
ದೇಣಿಗೆ ನೀಡಲಾಗುವುದು. ಈ ಹಿಂದೆ ಅತಿವೃಷ್ಟಿ, ಅನಾವೃಷ್ಟಿ, ಕೊರೋನಾ, ಪ್ರವಾಹ, ಪುಣ್ಯ ಕೋಟಿ ಯೋಜನೆಗೆ ಸಂಘದಿಂದ
ದೇಣಿಗೆ ನೀಡಲಾಗಿದೆ. ನಾನೂ ಅಧ್ಯಕ್ಷನಾದ ನಂತರ 1 ಸಾವಿರ ಕೋಟಿ ರು.ಗಳಷ್ಟು ದೇಣಿಗೆಯನ್ನು ಸಂಘದಿಂದ ನೀಡಲಾಗಿದೆ. 2022ರಲ್ಲಿ 7ನೇ ವೇತನ ಆಯೋಗದ ಶಿಫಾರಸ್ಸು ಜಾರಿಗೊಳ್ಳಬೇಕಿತ್ತು ಎಂದರು.
ರಾಜ್ಯದಲ್ಲಿ ಪ್ರೌಢಶಾಲಾ ಶಿಕ್ಷಕರಿಗೆ ಪಿಯು ಉಪನ್ಯಾಸಕರಾಗಿ ಮುಂಬಡ್ತಿ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಅರ್ಹ ವಿದ್ಯಾರ್ಹತೆ ಹೊಂದಿರುವ ಶಿಕ್ಷಕರ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಪಿಯು ಶಿಕ್ಷಣ ಮಂಡಳಿ ಅಧಿಕಾರಿಗಳೊಂದಿಗೆ ಇದೇ ವಿಚಾರದ ಬಗ್ಗೆ ಚರ್ಚೆಮಾಡಲಾಗಿದೆ ಎಂದು ಷಡಕ್ಷರಿ ಹೇಳಿದರು.
ಸಂಘದ ರಾಜ್ಯ ಹಿರಿಯ ಉಪಾಧ್ಯಕ್ಷರಾದ ಎಂ.ವಿ.ರುದ್ರಪ್ಪ, ಬಸವರಾಜ, ಖಜಾಂಚಿಸಿದ್ದರಾಮಪ್ಪ, ಜಿಲ್ಲಾಧ್ಯಕ್ಷ ವೀರೇಶ ಒಡೇನಪುರ, ನಿಕಟಪೂರ್ವ ಅಧ್ಯಕ್ಷ ಬಿ.ಪಾಲಾಕ್ಷಿ, ಜಿಲ್ಲಾ ಕಾರ್ಯದರ್ಶಿ ಗುರುಮೂರ್ತಿ, ಖಜಾಂಚಿ ಬಿ.ಆರ್. ತಿಪ್ಪೇಸ್ವಾಮಿ, ರಾಜ್ಯ ಪರಿಷತ್‌ನ ಸದಸ್ಯೆ ಮಂಜಮ್ಮ, ಎನ್‌ಪಿಎಸ್ ನೌಕರರ ಸಂಘದ ಮೋಹನ್ ಇತರರಿದ್ದರು.



