ದಾವಣಗೆರೆ: ಮಾರ್ಚ್ 26 ಮತ್ತು 27 ರಂದು ದಾವಣಗೆರೆ ತಾಲೂಕಿನ ಎಲೆಬೇತೂರಿನಲ್ಲಿ ದಾವಣಗೆರೆ ಜಿಲ್ಲಾ 11 ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಲಿದ್ದು, ಈ ಸಮ್ಮೇಳನದಲ್ಲಿ ಪುಸ್ತಕ ಮಾರಾಟ ಮಳಿಗೆಗಳಿಗೆ ಪ್ರಥಮ ಆದ್ಯತೆಯ ಮೇರೆಗೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಬಿ.ವಾಮದೇವಪ್ಪ ತಿಳಿಸಿದ್ದಾರೆ.
ಸಮ್ಮೇಳನ ನಡೆಯುವ ಸ್ಥಳದಲ್ಲಿ ಪುಸ್ತಕ ಮಾರಾಟ ಮಳಿಗೆಗಳು ಮತ್ತು ಇನ್ನಿತರ ಮಳಿಗೆಗಳನ್ನು ಹಾಕಲು ಇಚ್ಛಿಸುವವರು ಮಾ. 22 ರೊಳಗಾಗಿ ತಮ್ಮ ಹೆಸರನ್ನು ಕಡ್ಡಾಯವಾಗಿ ನೊಂದಾಯಿಸಿಕೊಳ್ಳಬೇಕು. ಬೇರೆ ವ್ಯಾವಹಾರಿಕ ಮಳಿಗೆಗಳಿಗೂ ಅವಕಾಶವಿರುತ್ತದೆ. ಆದರೆ ಈ ಕುರಿತು ಕಸಾಪ ಜಿಲ್ಲಾಧ್ಯಕ್ಷರ ನಿರ್ಣಯವೇ ಅಂತಿಮವಾಗಿರುತ್ತದೆ ಹಾಗೂ ಪ್ರಥಮ ಆದ್ಯತೆ ಪುಸ್ತಕ ಮಾರಾಟ ಮಳಿಗೆಗಳಿಗೆ ಇರುತ್ತದೆ.
ಮಳಿಗೆಗಳಿಗೆ ಮುಂಗಡವಾಗಿ ನೊಂದಾಯಿಸಿಕೊಳ್ಳಲು ಇಚ್ಛಿಸುವವರು ಹೆಚ್.ಎಸ್.ಚೇತನ್ ಕುಮಾರ್, ಮೊಬೈಲ್ ಸಂಖ್ಯೆ: 80 50401090 ಹಾಗೂ ಬಿ.ಎಸ್. ಗಿರೀಶ್ 9620380588 ಸಂಪರ್ಕಿಸಿ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳುವಂತೆ ಬಿ.ವಾಮದೇವಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.