ದಾವಣಗೆರೆ: ಭಾರತದಲ್ಲಿ ಅತಿ ಎತ್ತರದ ಕನಕದಾಸ ಪ್ರತಿಮೆ ನಿರ್ಮಾಣಕ್ಕೆ 5 ಕೋಟಿ ಬಿಡುಗಡೆ ಮತ್ತು ರಾಯಣ್ಣ ಪ್ರಾಧಿಕಾರಕ್ಕೆ ಬಾಕಿ ಇರುವ 30 ಕೋಟಿ ಹಣವನ್ನು ನೀಡುತ್ತೇನೆ ಎಂದು ಸಿಎಂ ಯಡಿಯೂರಪ್ಪ ಭರವಸೆ ನೀಡಿದರು.
ತಾಲ್ಲೂಕಿನ ಬೆಳ್ಳೂಡಿ ಗ್ರಾಮದ ಕಾಗಿನೆಲೆ ಶಾಖಾ ಮಠದಲ್ಲಿ ವಿದ್ಯಾರ್ಥಿ ನಿಲಯ, ಮಹಾ ದ್ವಾರ ಉದ್ಘಾಟಿಸಿ ಮಾರನಾಡಿದರು.

ಐತಿಹಾಸಿಕ ಕ್ಷೇತ್ರ ಕಾಗಿನೆಲೆ ಧರ್ಮ ಭೂಮಿಯಾಗಿದೆ.ಆಧ್ಯಾತ್ಮಿಕ ದಾರ್ಶನಿಕ ಕವಿ ಕನಕದಾಸರು, ಸಾಹಿತ್ಯದ ಮೂಲಕ ಜೀವನ ಮೌಲ್ಯಗಳನ್ನು ತಿಳಿಸಿದವರು.ಕನಕದಾಸರ ಆದರ್ಶದ ಪರಂಪರೆಯನ್ನು ನಿರಂಜನಾನಂದ ಪುರಿ ಮುಂದುವರಿಸುತ್ತಾರೆ ಎಂದರು.
ಎರಡು ಸಾವಿರ ವಿದ್ಯಾರ್ಥಿಗಳಿಗೆ ದಾಸೋಹ ನೀಡುತ್ತಿದ್ದಾರೆ ಶ್ರೀಗಳು, ಎಲ್ಲಾ ವರ್ಗದ ಏಳಿಗೆಗೆ ಸರ್ಕಾರ ಬದ್ಧವಾಗಿದೆ.ಪೂಜ್ಯರು ಪ್ರಸ್ತಾಪ ಮಾಡಿದಂತೆ ಈಗಾಗಲೇ ಕುರುಬ ಸಮಾಜದ ಕುಲಶಾಸ್ತ್ರೀಯ ಅಧ್ಯಯನ ನಡೆಯುತ್ತಿದೆ.ಮೀಸಲಾತಿ ಜಾಸ್ತಿ ಮಾಡುವುದಕ್ಕೆ ಅಪಿಡೇವಿಟ್ ಸಲ್ಲಿಸಿದ್ದೇವೆ.ಯಾವುದೇ ಬೇಧ ಭಾವವಿಲ್ಲದೆ ನಿಮ್ಮ ಆಪೇಕ್ಷೆ ಈಡೇರಿಸುತ್ತೇವೆ ಎಂದರು.



