ಹರಿಹರ: ಕೇಂದ್ರ ಸರ್ಕಾರದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ, ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆಯಡಿ 20 ಮಂದಿಗೆ ಉಚಿತ ಸಹಾಯಕ ಪಂಚಕರ್ಮ ಚಿಕಿತ್ಸೆ ತರಬೇತಿ ನೀಡಿ ಉದ್ಯೋಗಾವಕಾಶ ನೀಡಲಾಗುವುದು. ಆಸಕ್ತರು ಮಾ.10ರೊಳಗೆ ದಾವಣಗೆರೆ ತಾಲೂಕು ದೊಡ್ಡಬಾತಿಯ ತಪೋವನದಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಜೊತೆಯಲ್ಲಿ ಆಧಾರ್ ಕಾರ್ಡ್ ಮತ್ತು ಪಾಸ್‌ಪೋರ್ಟ್ ಅಳತೆಯ ಫೋಟೋ ಕಡ್ಡಾಯ ಸಲ್ಲಿಸಬೇಕು ಎಂದು ತಪೋವನ ಮುಖ್ಯಸ್ಥ ಡಾ. ಶಶಿಕುಮಾರ್ ತಿಳಿಸಿದ್ದಾರೆ.



