ದಾವಣಗೆರೆ: ದಾವಣಗೆರೆ ಜಿಲ್ಲಾ ಪ್ರಾಣಿ ದಯಾ ಸಂಘಕ್ಕೆ ಒಬ್ಬ ಗೌರವಾನ್ವಿತ ಜಿಲ್ಲಾ ಕಾನೂನು ಪ್ರಾಣಿ ಕಲ್ಯಾಣ ಸಲಹೆಗಾರರು (Honorary ವಕೀಲರನ್ನು) ನೇಮಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ನ್ಯಾಯಾಲಯಗಳಲ್ಲಿ ಪ್ರಾಣಿಗಳ ಮೇಲಿನ ಕ್ರೌರ್ಯದ ಬಗ್ಗೆ ದಾಖಲಾಗಿರುವ ಪ್ರಕರಣಗಳ ಸಂಖ್ಯೆ ಹಾಗೂ ಪ್ರಕರಣಗಳು ಯಾವ ಹಂತದಲ್ಲಿದೆ, ಇಂತಹ ಪ್ರಕರಣಗಳ ಕುರಿತು ಕೈಗೊಳ್ಳಬಹುದಾದ ಕಾನೂನು ಕ್ರಮಗಳ ಕುರಿತು ಸಲಹೆ ನೀಡಲು ಪ್ರತಿ ಜಿಲ್ಲೆಗಳಲ್ಲಿ ಜಿಲ್ಲಾ ಪ್ರಾಣಿದಯಾ ಸಂಘದ ವತಿಯಿಂದ ಒಬ್ಬ ಗೌರವಾನ್ವಿತ ಜಿಲ್ಲಾ ಕಾನೂನು ಪ್ರಾಣಿ ಕಲ್ಯಾಣ ಸಲಹೆಗಾರರನ್ನು (Honorary ವಕೀಲರನ್ನು) ನೇಮಿಸಿಕೊಳ್ಳಲಾಗುತ್ತದೆ.
ನೇಮಕಗೊಂಡ ನಂತರ ಯಾವುದೇ ಸೇವಾ ಶುಲ್ಕವನ್ನು ಪಡೆಯದೆ ಪ್ರಾಣಿ ಕಲ್ಯಾಣಕ್ಕಾಗಿ ಕೆಲಸ ನಿರ್ವಹಿಸಲು ಆಸಕ್ತರಾಗಿರಬೇಕು. 15 ವರ್ಷ ವಕೀಲ ವೃತ್ತಿಯಲ್ಲಿ ಅನುಭವ ಹೊಂದಿದ ವಕೀಲರು, ಕಾರ್ಯನಿರ್ವಹಿಸಲು ಆಸಕ್ತರು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.



