ದಾವಣಗೆರೆ: ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿಯಲ್ಲಿ ಖಾಲಿ ಇರುವ ಲೋಡರ್ಸ್, ಕ್ಲೀನರ್ಸ್ ಹುದ್ದೆ ನೇರ ನೇಮಕಾತಿಗೆ ಮಾ.24 ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಇದೀಗ ಹುದ್ದೆಗಳ ವರ್ಗೀಕರಣದಲ್ಲಿ ರೋಸ್ಟರ್ ನಿಯಮ ಅಳವಡಿಸಿ ಜಿಲ್ಲಾಧಿಕಾರಿ ಕಾರ್ಯಾಲಯ ಏ. 08 ರಂದು ತಿದ್ದುಪಡಿ ಅಧಿಸೂಚನೆ ಹೊರಡಿಸಿದೆ. ಜಿಲ್ಲೆಯಲ್ಲಿ ಲೋಡರ್ಸ್ 27 ಹಾಗೂ 6 ಕ್ಲಿನರ್ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುವುದು. ಹುದ್ದೆಗಳ ವಿವರ ಈ ಕಳಗಿನಂತೆ ಇದೆ.
- ಚನ್ನಗಿರಿ ಪುರಸಭೆ-06 ಲೋಡರ್ಸ್
- ಮಲೇಬೆನ್ನೂರು ಪುರಸಭೆ-08 ಲೋಡರ್ಸ್
- ಹೊನ್ನಾಳಿ ಪುರಸಭೆ- 08 ಲೋಡರ್ಸ್
- ಜಗಳೂರು ಪಟ್ಟಣ ಪಂಚಾಯ್ತಿ-01 ಲೋಡರ್ಸ್
- ನ್ಯಾಮತಿ ಪಟ್ಟಣ ಪಂಚಾಯ್ತಿ 04 ಲೋಡರ್ಸ್
- ಹರಿಹರ ನಗರಸಭೆ 01 ಕ್ಲಿನರ್
- ಚನ್ನಗಿರಿ ಪುರಸಭೆ 01 ಕ್ಲಿನರ್
- ಮಲೇಬೆನ್ನೂರು 02 ಕ್ಲಿನರ್
- ಹೊನ್ನಾಳಿ ಪುರಸಭೆ 02 ಕ್ಲಿನರ್



