ದಾವಣಗೆರೆ: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಎಲ್ಲಾ ಐ.ಟಿ.ಐ ಹಾಗೂ ಎಸ್.ಎಸ್.ಎಲ್.ಸಿ ಪಾಸಾದ ವಿದ್ಯಾರ್ಥಿಗಳಿಗೆ ಶಿಶಿಕ್ಷು ಪಡೆಯಲು ಶಿಶಿಕ್ಷು(ಅಪ್ರೆಂಟಿಸ್) ಮೇಳವನ್ನು ದಾವಣಗರೆಯಲ್ಲಿ ಏ.21 ರಂದು ಬೆಳಿಗ್ಗೆ 09 ರಿಂದ ಸಂಜೆ 04.30 ರವರೆಗೆ ಹದಡಿ ರಸ್ತೆಯಲ್ಲಿರುವ ಸರ್ಕಾರಿ ಐ.ಟಿ.ಐ ಕಾಲೇಜಿನಲ್ಲಿ ಆಯೋಜಿಸಲಾಗಿದೆ.
ಮೇಳದಲ್ಲಿ ಖಾಸಗಿ ಕಂಪನಿಗಳು ಭಾಗವಹಿಸಲಿದ್ದು ಶಿಶಿಕ್ಷು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಐ.ಟಿ.ಐ ಅಂತಿಮ ವರ್ಷದಲ್ಲಿ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ.
ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ ಮಾಕ್ರ್ಸ್ ಕಾರ್ಡ್, ಐ.ಟಿ.ಐ ಮಾಕ್ರ್ಸ್ ಕಾರ್ಡ್, ಪೋಟೋ ಆಧಾರ್‍ಕಾರ್ಡ್, ಕನಿಷ್ಠ 02 ಬಯೋಡಾಟಾ ಪ್ರತಿ ತರತಕ್ಕದ್ದು. ಶಿಶಿಕ್ಷು ಮೇಳದಲ್ಲಿ ಭಾಗವಹಿಸಲು ಯಾವುದೇ ಶುಲ್ಕ ಇರುವುದಿಲ್ಲ. ಕಡ್ಡಾಯವಾಗಿ ಕೋವಿಡ್-19 ನಿಯಮಗಳನ್ನು ಪಾಲಿಸತಕ್ಕದ್ದು. ಮೇಳದಲ್ಲಿ ಭಾಗವಹಿಸಲು
ಇಚ್ಚಿಸುವ ಅಭ್ಯರ್ಥಿಗಳು ಏ.21 ರೊಳಗೆhttps://docs.google.com/forms/d/e/1FAIpQLSd4xeoLKp2-cYa1zPHggbCOQZw7FOa1GQDcMNthKr8rfbCXkA/viewform?ನೋಂದಾಯಿಸಿಕೊಳ್ಳಬಹುದು.
ಭಾಗವಹಿಸಲು ಇಚ್ಚಿಸುವ ಉದ್ಯಮಿದಾರರು ಏ.21 ರೊಳಗೆ https://docs.google.com/forms/d/e/1FAIpQLSecYQC-WAv2uqsmkKtISmVg6IK1U21ZmBv911phldGBSbTTcQ/viewform?8203366 ಲಿಂಕ್ ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 08192-260192 ಅಥವಾ 9902232155, 8310273541 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.



