ದಾವಣಗೆರೆ: ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಪ್ರಸಕ್ತ ಸಾಲಿಗೆ ಹೊಸದಾಗಿ ಮಂಜೂರಾಗಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಶಾಲೆ ಹಾಗೂ ಮೌಲಾನಾ ಆಜಾದ್ ಮಾದರಿ ಶಾಲೆಗಳಿಗೆ ಆಂಗ್ಲ ಮಾಧ್ಯಮದಲ್ಲಿ ಭೋಧಿಸಲು ತಾತ್ಕಾಲಿಕವಾಗಿ 16 ಅತಿಥಿ ಶಿಕ್ಷಕರನ್ನು ನೇಮಕ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
- 16 ಅತಿಥಿ ಶಿಕ್ಷಕರ ಭರ್ತಿ ಅರ್ಜಿ ಆಹ್ವಾನ
- ಮೊರಾರ್ಜಿ ದೇಸಾಯಿ ಶಾಲೆ , ಮೌಲಾನಾ ಆಜಾದ್ ಮಾದರಿ ಶಾಲೆ
- ವಿದ್ಯಾರ್ಹತೆ ಬಿ.ಎ, ಬಿ.ಇಡಿ
ಅಭ್ಯರ್ಥಿಗಳು ನ.14 ರೊಳಗಾಗಿ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ದಾವಣಗೆರೆ ಇಲ್ಲಿಗೆ ಅರ್ಜಿಗಳನ್ನು ಸಲ್ಲಿಸಬಹುದು. ಚನ್ನಗಿರಿ ತಾಲ್ಲೂಕಿನ ಬಸವಪಟ್ಟಣ ಗ್ರಾಮದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಕನ್ನಡ ಶಿಕ್ಷಕರು, ವಿದ್ಯಾರ್ಹತೆ ಬಿ.ಎ, ಬಿ.ಇಡಿ, ಹುದ್ದೆ ಸಂಖ್ಯೆ-4.
ದಾವಣಗೆರೆಯ ವಿನೋಬನಗರದ ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಮಾದರಿಶಾಲೆಗೆ ಇಂಗ್ಲೀಷ್ ಶಿಕ್ಷಕರು,
ಸಮಾಜ ವಿಜ್ಞಾನ ಶಿಕ್ಷಕರು ವಿದ್ಯಾರ್ಹತೆ ಬಿ.ಎ, ಬಿ.ಇಡಿ, ಹುದ್ದೆ ಸಂ: 4, ದಾವಣಗೆರೆಯ ಬಿನ್.ಎನ್ ಲೇಔಟ್‍ನ ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಮಾದರಿ ಶಾಲೆಗೆ ಗಣಿತ ಶಿಕ್ಷಕರು, ಸಾಮಾನ್ಯ ವಿಜ್ಞಾನ ಶಿಕ್ಷಕರು ವಿದ್ಯಾರ್ಹತೆ ಬಿ.ಎಸ್ಸಿ, ಬಿ.ಇಡಿ ಹುದ್ದೆ ಸಂ: 4, ದಾವಣಗೆರೆಯ , ಕೆ.ಟಿ.ಜಿ ನಗರದ ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಮಾದರಿಶಾಲೆಗೆ ಉರ್ದು ಶಿಕ್ಷಕರು ವಿದ್ಯಾರ್ಹತೆ ಬಿ. ಎ, ಬಿ.ಇಡಿ, ಹುದ್ದೆ ಸಂ:3 ಮತ್ತು ಹಿಂದಿ ಶಿಕ್ಷಕರು ವಿದ್ಯಾರ್ಹತೆ ಬಿ.ಎ, ಬಿ.ಇಡಿ ಹುದ್ದೆ ಸಂ: 1 ಹೆಚ್ಚಿನ ಮಾಹಿತಿಗಾಗಿ ದೂ.ಸಂ:08192-250022 ನ್ನು ಸಂಪರ್ಕಿಸಲು ತಿಳಿಸಲಾಗಿದೆ.



