ದಾವಣಗೆರೆ; ದಾವಣಗೆರೆ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ಆಫ್ ಲೈನ್ ಮೂಲಕ ಅರ್ಜಿ ಆಹ್ವಾನಿಸ ಲಾಗಿದೆ.
ಮಿಸಲಾತಿಗೆ ಅನುಗುಣವಾಗಿ ಸ್ಥಳೀಯ ಮಹಿಳಾ ಹಾಗೂ ಅಲ್ಪ ಸಂಖ್ಯಾತ ಮಹಿಳೆಯರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಶಿಶು ಅಭಿವೃದ್ಧಿಯ ಯೋಜನಾ ಕಚೇರಿಯಲ್ಲಿ ಅರ್ಜಿ ನಮೂನೆಯನ್ನು ಪಡೆದು ಏಪ್ರಿಲ್ 26ರೊಳಗಾಗಿ ಅರ್ಜಿಯನ್ನು ಕಚೇರಿಗೆ ಸಲ್ಲಿಸಬೇಕು. ವಿವರಕ್ಕೆ ಶಿಶು ಅಭಿವೃದ್ಧಿ ಯೋಜ ನಾಧಿಕಾರಿಗಳ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ನಂದಗೋಕುಲ ಬಿಲ್ಡಿಂಗ್, ದುರ್ಗಾಂಬಿಕ ಶಾಲೆ ಎದುರು ನಿಟ್ಟುವಳ್ಳಿ ರೋಡ್, ಸರಸ್ವತಿ ಬಡಾವಣೆ, ದಾವಣಗೆರೆ ಹೆಚ್ಚಿನ ಮಾಹಿತಿಗೆ ದೂರವಾಣಿ; 08192-
263219 ಸಂಪರ್ಕಿಸಬಹುದು.