ದಾವವಣಗೆರೆ: ಅಕ್ರಮ ಮಣ್ಣಲ್ಲಿ ಹಿರಿಯರಾದ ಶಾಮನೂರು ಶಿವಶಂಕರಪ್ಪ ಕಾರ್ಯಕ್ರಮವನ್ನು ಮಲ್ಲಣ್ಣ (ಜಿಲ್ಲಾ ಉಸ್ತುವಾರಿ ಜಿಲ್ಲಾ ಉಸ್ತುವಾರಿ ಸಚಿವ ಎಸ್ . ಎಸ್ . ಮಲ್ಲಿಕಾರ್ಜುನ ) ಮಾಡಿದ್ದಿಯಲ್ಲಪ್ಪ. ಅದಕ್ಕೆ ಅವರ (ಶಾಮನೂರು ಶಿವಶಂಕರಪ್ಪ) ಆತ್ಮಕ್ಕೆಶಾಂತಿ ಸಿಕ್ಕಿಲ್ಲ. ಅವರ ಆತ್ಮ ಇಲ್ಲೇ ಸುತ್ತು ಹೊಡೆಯುತ್ತಿದೆ ಎಂದು ಮಾಜಿ ಶಾಸಕ ಎಚ್. ಎಸ್. ಶಿವಶಂಕರ್ ಕಿಡಿಕಾರಿದರು.
ದಾವಣಗೆರೆ: ಶಾಸಕ ಬಿ.ಪಿ. ಹರೀಶ್ ವಿರುದ್ಧ ಜಾತಿನಿಂದನೆ ಕೇಸ್ ದಾಖಲು
ಕಾಡಜ್ಜಿ ಗ್ರಾಮದ ಕೃಷಿ ಇಲಾಖೆ ಸುತ್ತಮುತ್ತ, ಬಾತಿ ಗುಡ್ಡ ಸೇರಿದಂತೆ ವಿವಿಧೆಡೆಯಿಂದ ಇತ್ತೀಚಿಗೆ ನಿಧನರಾದ ಶಾಮನೂರು ಶಿವಶಂಕರಪ್ಪ ಕಾರ್ಯಕ್ರಮಕ್ಕೆ ಕಲ್ಲೇಶ್ವರ ರೈಸ್ ಮಿಲ್ ಹಿಂಭಾಗದ ಜಮೀನನ್ನು ಸಮ ಮಾಡಲು ಅಕ್ರಮವಾಗಿ 5 ಸಾವಿರಕ್ಕೂ ಹೆಚ್ಚು ಲೋಡ್ ಮಣ್ಣನ್ನು ಅಕ್ರಮವಾಗಿ ಸಾಗಣೆ ಮಾಡಲಾಗಿದೆ. ಹಿರಿಯರಾದ ಶಾಮನೂರು ಶಿವಶಂಕರಪ್ಪ ಬದುಕಿದ್ದಾಗ ನ್ಯಾಯ, ನೀತಿ, ಧರ್ಮ ಅಂತ ಕ್ರಮವಾಗಿ ಬದುಕಿದ್ದರು. ಆದರೆ, ಅವರ ನಿಧನ ನಂತರ ಅಕ್ರಮ ಮಣ್ಣಲ್ಲಿ ಕಾರ್ಯಕ್ರಮ ಮಾಡಿದ್ರಲ್ಲಾ …!! ಎಂದು ಆತ್ಮಕ್ಕೆ ಶಾಂತಿ ಸಿಕ್ಕಿಲ್ಲ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ದಾವಣಗೆರೆ ಉಪಚುನಾವಣೆ: ಕುಟುಂಬ ರಾಜಕಾರಣಕ್ಕೆ ಮಣಿ ಹಾಕಬೇಡಿ; ಅಹಿಂದ ವರ್ಗಕ್ಕೆ ಟಿಕೆಟ್ ನೀಡಿ
ಜಿಲ್ಲಾಡಳಿತ ಗುಲಾಮರ ರೀತಿ ವರ್ತನೆ
ಶಾಮನೂರು ಶಿವಶಂಕರಪ್ಪ ಸಮರಾಧನೆ ಹೆಸರಿನಲ್ಲಿ ಐದು ಸಾವಿರಕ್ಕೂ ಹೆಚ್ಚು ಲೋಡ್ ಮಣ್ಣು ಸಾಗಣೆ ಮಾಡಲಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ , ಗಣಿ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿಕೊಂಡು ಕುಳಿತಿದ್ದಾರೆ. ಒಬ್ಬ ಸಾಮಾನ್ಯ ಜನರು ಒಂದು ಚೀಲ ಮಣ್ಣು ತಂದರು ಕೇಸ್ ಹಾಕ್ತಿರಾ.., ಈಗ ಜಿಲ್ಲಾ ಉಸ್ತುವಾರಿ ಸಚಿವರೇ ಅಕ್ರಮ ಎಸಗಿದ್ದಾರಲ್ಲ…!, ಜಿಲ್ಲಾಡಳಿತ ಗುಲಾಮರ ರೀತಿ ವರ್ತಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಈ ಕೂಡಲೇ ತಪ್ಪಿತ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳದಿದ್ದರೆ ಲೋಕಾಯುಕ್ತದಲ್ಲಿ ಕೇಸ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು.
ಆತ್ಮಕ್ಕೆ ಶಾಂತಿ ಸಿಗಬೇಕಾದರೆ ದಂಡ, ಕೇಸ್ ಹಾಕಿ
ದೇಶದಲ್ಲಿ ಯಾರೂ ಸಹ ಕಾನೂನಿಗಿಂತ ದೊಡ್ಡವರಿಲ್ಲ. ಎಲ್ಲರೂ ಕಾನೂನಿನ ಮುಂದೆ ಸಮಾನರು. ಜಿಲ್ಲಾಡಳಿತ ಕೂಡಲೇ ಮಣ್ಣು ಸಾಗಣೆ ಮಾಡಿದವರಿಂದ ದಂಡ ವಸೂಲಿ ಮಾಡಬೇಕು. ಜೊತೆಗೆ ಕೇಸ್ ಅನ್ನು ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.ಶಿವಶಂಕರಪ್ಪರು ದೊಡ್ಡವರು.ಅಕ್ರಮವಾಗಿ ಮಣ್ಣಿನಿಂದ ಶಿವಾರಾಧನೆ ಮಾಡಿದ್ದರೆ ಖಂಡಿತವಾಗಿಯೂ ಹಿರಿಯ ಜೀವದ ಆತ್ಮಕ್ಕೆ ಶಾಂತಿ ಸಿಗಲ್ಲ. ಇದ್ದಾಗ ಕ್ರಮವಾಗಿ ಬದುಕಿದ್ದವರು. ಅಕ್ರಮವಾಗಿ ಮಣ್ಣು ಸಾಗಣೆ ಮಾಡಿ ಮಾಡಿದ್ದೀಯಾ ಅಂತಾ ಆತ್ಮ ಇಲ್ಲೇ ಸುತ್ತು ಹೊಡೆಯುತ್ತಿದೆ. ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಅಕ್ರಮವಾಗಿ ಮಣ್ಣು ಸಾಗಣೆ ಮಾಡಿದವರ ಮೇಲೆ ದಂಡ ಹಾಕಿ. ಕೇಸ್ ದಾಖಲಾಗಬೇಕು ಎಂದು ಆಗ್ರಹಿಸಿದರು.
ಶಾಮನೂರು ಶಿವಶಂಕರಪ್ಪರ ಬಗ್ಗೆ ಎಲ್ಲರಿಗೂ ಗೌರವಿದೆ. ಆರು ಬಾರಿ ಶಾಸಕರಾಗಿ ಜನಸೇವೆ ಮಾಡಿದವರು. ದಾನ ಧರ್ಮವನ್ನೂ ಮಾಡಿದ್ದವರು. ಎಂದೂ ಅಕ್ರಮಕ್ಕೆ ಪ್ರೋತ್ಸಾಹ ನೀಡಿದವರಲ್ಲ. ಆದರೆ ಅವರ ಪುಣ್ಯಸ್ಮರಣೆಯಂಥ ಕಾರ್ಯಕ್ರಮಕ್ಕಾಗಿ ಅಕ್ರಮವಾಗಿ ಮಣ್ಣು ಸಾಗಣೆ ಮಾಡಿರುವುದು ವಿಷಾದನೀಯ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲೇಬೇಕು. ಜಿಲ್ಲಾಡಳಿತ ಯಾವುದೇ ಕಾರಣಕ್ಕೂ ಒತ್ತಡಕ್ಕೆ ಮಣಿಯಬಾರದು ಎಂದು ಒತ್ತಾಯಿಸಿದರು.
ಶಾಸಕ ಹರೀಶ್ ಗೆ ಬೆಂಬಲ
ಅಕ್ರಮವಾಗಿ ಮಣ್ಣು ಸಾಕಾಣಿಕೆ ಬಗ್ಗೆ ರೆಡ್ ಹ್ಯಾಂಡ್ ಆಗಿ ಹಿಡಿದ ಹರಿಹರ ಶಾಸಕ ಬಿ.ಪಿ.ಹರೀಶ್ ಕಾರ್ಯಕ್ಕೆ ಜೆಡಿಎಸ್ ಪಕ್ಷ ಮತ್ತು ನಾವು ಸಂಪೂರ್ಣ ಬೆಂಬಲ ನೀಡಲಿದೆ. ಈ ಬಗ್ಗೆ ಎಲ್ಲಾ ದಾಖಲೆ ಸಂಗ್ರಹಿಸಿ ಲೋಕಾಯುಕ್ತದಲ್ಲಿ ಕೇಸ್ ಹಾಕುತ್ತೇವೆ ಎಂದರು.



