ದಾವಣಗೆರೆ: ಇಂದು ಬೆಳ್ಳಂಬೆಳಗ್ಗೆ ಜಿಲ್ಲೆಯ ಜಗಳೂರು ಸಮೀಪದ ಕಾನನಕಟ್ಟೆ ಬಳಿ ರಾಷ್ಟ್ರೀಯ ಹೆದ್ದಾರಿಯ ರಸ್ತೆ ಡಿವೈಡರ್ ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ 7 ಮಂದಿ ಮೃತಪಟ್ಟಿದ್ದರು. ಬೆಳಗ್ಗೆ 04 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಚಾಲಕ ನಿದ್ರೆಯ ಮಂಪರಿನಲ್ಲಿ ಇದ್ದುದೇ ಈ ದುರ್ಘಟನೆಗೆ ಮುಖ್ಯ ಕಾರಣವಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈ ಬಗ್ಗೆ ಮಾಹಿತಿ ನೀಡಿದ್ದು, ಬೆಂಗಳೂರಿನ ಖಾಸಗಿ ವಿಶ್ವವಿದ್ಯಾಲಯದಲ್ಲಿ ನೌಕರರಾಗಿದ್ದ ಯುವಕರು ಸಂಕ್ರಾಂತಿ ಹಬ್ಬ ಹಾಗೂ ವೀಕೆಂಡ್ ಕರ್ಫ್ಯೂ ಇದ್ದುದರಿಂದ ಹಂಪಿ ನೋಡಲು ಹೊರಡುತ್ತಿದ್ದರು. ನಿದ್ರೆಯ ಮಂಪರಿನಲ್ಲಿದ್ದ ಚಾಲಕ ರಸ್ತೆಯ ಪಕ್ಕದಲ್ಲಿದ್ದ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದಾನೆ. ಮೃತರು ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಕರಡಕಲ್ ಗ್ರಾಮದ ಮಲ್ಲನಗೌಡ (22), ಸಂಜೀವ್ (20), ಸಂತೋಷ್ (21). ಜೈಭೀಮ್ (18), ವಿಜಯಪುರ ಜಿಲ್ಲೆಯ ತಾಳಿಕೋಟೆಯ ರಘು (23), ವಿಜಯನಗರ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ಸಿದ್ದೇಶ್ (20), ವೇದಮೂರ್ತಿ ಹಾಗೂ ಈಚಲಬೊಮ್ಮನಹಳ್ಳಿಯ ಆನಂದ್ (18) ಎಂದು ಗುರುತಿಸಲಾಗಿದೆ.



