ದಾವಣಗೆರೆ; ಚಾಲಕನ ನಿಯಂತ್ರಣ ತಪ್ಪಿ ಶಾಲಾ ಬಸ್ ಮರಕ್ಕೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ 5 ಮಕ್ಕಳು ಸೇರಿ ಚಾಲಕ, ನಿರ್ವಾಹಕ ಗಾಯಗಳಾಗಿವೆ.
ಜಿಲ್ಲೆಯ ಜಗಳೂರು ತಾಲ್ಲೂಕಿನ ಎನ್ ಎಂಕೆ ಆಂಗ್ಲ ಮಾಧ್ಯಮ ಶಾಲೆ ಸೇರಿದ ಬಸ್ ಅಫಘಾತವಾಗಿದೆ. ದಾವಣಗೆರೆಯ ರಸ್ತೆಯ ರಸ್ತೆಮಾಚಿಕೆರೆ ಬಳಿ ಈ ಅಪಘಾತ ಸಂಭವಿಸಿದೆ. ಶಾಲೆ ಮುಗಿದ ಬಳಿಕೆ ಮನೆಗಳಿಗೆ ಮಕ್ಕಳು ತೆರೆಳುತ್ತಿದ್ದಾಗ ಈ ಘಟನೆ ನಡೆದಿದೆ. ಓವರ್ ಟೇಕ್ ಮಾಡಲು ಹೋದಾಗ ಎದುರಿಗೆ ಬಂದ ವಾಹನಕ್ಕೆ ಡಿಕ್ಕಿ ಆಗುವುದನ್ನು ತಪ್ಪಿಸಲು ಹೋಗಿ ಚಾಲಕ ರುದ್ದೇಶ್ ನಿಯಂತ್ರಣ ತಪ್ಪಿ ಮರಕ್ಕೆ ಬಸ್ ಡಿಕ್ಕಿ ಹೊಡೆದಿದೆ. ಚಾಲಕನ ಎರಡೂ ಕಾಲುಗಳು ಮುರಿದಿವೆ. ನಿರ್ವಾಹಕ ಮತ್ತು 5 ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



