ದಾವಣಗೆರೆ: ಮನೆಯ ಇ-ಸ್ವತ್ತು ಮಾಡಿಕೊಡಲು 10 ಸಾವಿರಕ್ಕೆ ಲಂಚ ಪಡೆಯುತ್ತಿದ್ದ ವೇಳೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಪಲ್ಲಾಗಟ್ಟೆ ಗ್ರಾಮ ಪಂಚಾಯಿತಿ ಪಿಡಿಒ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಇದನ್ನೂ ಓದಿ-ದಾವಣಗೆರೆ: ಗಣೇಶ ಚತುರ್ಥಿ, ಈದ್ ಮಿಲಾದ್ ಮೆರವಣಿಗೆಗೆ ಡಿಜೆ ನಿಷೇಧ: ಜಿಲ್ಲಾಧಿಕಾರಿ
ಪಿಡಿಒ ಶಶಿಧರ್ ಪಾಟೀಲ್ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ. ಪಲ್ಲಾಗಟ್ಟೆ ಪಂಚಾಯಿತಿಗೆ ಸೇರಿದ ಸೂರಗೊಂಡನಹಳ್ಳಿ ಗ್ರಾಮದ ಎಸ್.ಸಿ.ಅಶೋಕ ಎಂಬುವರಿಗೆ ಸೇರಿದ ಮೂರು ಮನೆಗಳ ಇ-ಸ್ವತ್ತು ಮಾಡಿಕೊಡಲು 10,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಅಶೋಕ್
ದೂರು ನೀಡಿದ್ದರು. ದಾವಣಗೆರೆಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಶಶಿಧರ್ ಪಾಟೀಲ್ ಬಂಧನ ಮಾಡಿದ್ದಾರೆ.



