ದಾವಣಗೆರೆ: ಸಂತೆ ಮುಗಿಸಿಕೊಂಡು ಮನೆಗೆ ಬರುವಷ್ಟರಲ್ಲಿ ಬೀಗ ಮುರಿದು ಕಳವು ಪ್ರಕರಣದ ಆರೋಪಿಯನ್ನು ಜಗಳೂರು ಪೊಲೀಸರು ಪ್ರಕರಣ ದಾಖಲಾಗಿ ಕೇವಲ 12 ಗಂಟೆಯಲ್ಲಿ ಬಂಧನ ಮಾಡಿದ್ದಾರೆ. ಆರೋಪಿಯಿಂದ ಸುಮಾರು 6 ಲಕ್ಷ 40 ಸಾವಿರ ರೂ ಬೆಲೆ ಬಾಳುವ ಬಂಗಾರದ ಆಭರಣಗಳು ವಶಕ್ಕೆಪಡೆಯಲಾಗಿದೆ.
ಕ್ವಿಂಟಾಲ್ ಗೆ 2400 ರೂ. ಗಳಂತೆ ಡಿಸ್ಟಿಲರಿಗಳ ಮೂಲಕ ಮೆಕ್ಕೆಜೋಳ ಖರೀದಿಗೆ ಸಿದ್ಧತೆ; ಜಿಲ್ಲಾಧಿಕಾರಿ
ಜಗಳೂರು ತಾಲ್ಲೂಕಿನ ಬಿಸ್ತುವಳ್ಳಿ ಗ್ರಾಮದ ಶ್ರೀದೇವಿ ಡಿ.6 ರಂದು ಜಗಳೂರು ಪಟ್ಟಣಕ್ಕೆ ಸಂತೇಗೆಂದು ಮನೆಗೆ ಬೀಗ ಹಾಕಿಕೊಂಡು ಹೋಗಿದ್ದರು. ಸಂಜೆ ತಮ್ಮ ಮನೆಗೆ ಬಂದಾಗ ಮನೆಯ ಬಾಗಿಲ ಬೀಗವನ್ನು ಮುರಿದು ಗಾರ್ಡೇಜ್ ಬೀರುವಿನಲ್ಲಿಟ್ಟದ್ದ ಸುಮಾರು 6 ಲಕ್ಷ 40 ಸಾವಿರ ರೂ ಬೆಲೆ ಬಾಳುವ ಬಂಗಾರದ ಆಭರಣಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ಜಗಳೂರು ಪೊಲೀಸ್ ಠಾಣೆ ಪ್ರಕರಣ ದಾಖಲಿಸಿದ್ದರು.
ದಾವಣಗೆರೆ: ಮಹಿಳೆ ಸಾವಿಗೆ ಕಾರಣವಾದ ರಾಟ್ವೀಲರ್ ನಾಯಿಗಳು ಸಾವು; ನಾಯಿ ಮಾಲೀಕ ಅರೆಸ್ಟ್
ಈ ಪ್ರಕರಣದ ಆರೋಪಿತರನ್ನು ಮತ್ತು ಕಳುವಾದ ಸ್ವತ್ತನ್ನು ಪತ್ತೆ ಮಾಡಲು ಎಎಸ್ಪಿ ಪರಮೇಶ್ವರ ಹೆಗಡೆ ಹಾಗೂ ಡಿವೈಎಸ್ಪಿ ಬಸವರಾಜ್ ಬಿ ಎಸ್ ಮಾರ್ಗದರ್ಶನ ದಲ್ಲಿ ಜಗಳೂರು ಠಾಣೆಯ ಪೊಲೀಸ್ ನಿರೀಕ್ಷಕ ಸಿದ್ರಾಮಯ್ಯ ನೇತೃತ್ವದಲ್ಲಿ ಅಧಿಕಾರಿ ಸಿಬ್ಬಂದಿಗಳ ತಂಡ ರಚಿಸಲಾಗಿತ್ತು.
ಈ ತಂಡವು ಬಿಸ್ತುವಳ್ಳಿ ಗ್ರಾಮ ಪ್ರಕರಣದ ಆರೋಪಿ ತಿಪ್ಪೇಸ್ವಾಮಿಯನ್ನು (38) ಕೇವಲ 12 ಗಂಟೆಯಲ್ಲಿ ಬಂಧಿಸಲಾಗಿದೆ. ಆರೋಪಿತನಿಂದ ಕಳವು ಮಾಡಿದ್ದ ಸುಮಾರು 6 ಲಕ್ಷ 40 ಸಾವಿರ ರೂ ಬೆಲೆ ಬಾಳುವ ಬಂಗಾರದ ಆಭರಣಗಳನ್ನು ವಶಪಡೆದು ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಈ ಪ್ರಕರಣದ ಆರೋಪಿತನ ಪತ್ತೆ ಹಾಗೂ ಸ್ವತ್ತು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ ಪ್ರಸಂಸಿದ್ದಾರೆ.



