ದಾವಣಗೆರೆ: ಪತ್ನಿಯ ಶೀಲ ಶಂಕಿಸಿದ ಪತಿ, ಪತ್ನಿಯ ಕುತ್ತಿಗೆ ಕೊಯ್ದು ಹತ್ಯೆ ಮಾಡಿರುವ ಘಟನೆ ಜಗಳೂರು ತಾಲ್ಲೂಕಿನ ಚಿಕ್ಕಮಲ್ಲನಹೊಳೆ ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಗ್ರಾಮದ ಬಾಲರಾಜು (40) ಪತ್ನಿ ಜ್ಯೋತಿಯನ್ನು (38) ಕುಡುಗೋಲಿನಿಂದ ಕತ್ತು ಸೀಳಿ ಭೀಕರವಾಗಿ ಕೊ*ಲೆ ಮಾಡಿದ್ದಾನೆ. ಬಾಲರಾಜು ಹಾಗೂ ಜ್ಯೋತಿಗೆ 7 ವರ್ಷದ ಮಗುವಿದ್ದು, ಜ್ಯೋತಿಗೆ ಅನೈತಿಕ ಸಂಬಂಧವಿದೆ ಎಂದು ಬಾಲರಾಜು ಹಲವು ವರ್ಷಗಳಿಂದ ಜಗಳ ನಡೆಯುತ್ತಿತ್ತು. ಈ ವಿಚಾರವಾಗಿ ಇಬ್ಬರೂ ಬೇರೆಬೇರೆ ವಾಸವಾಗಿದ್ದರು. ಆದರೆ, ಒಂದು ವರ್ಷದ ಹಿಂದೆ ಇಬ್ಬರೂ ಮತ್ತೆ ಒಂದೇ
ಮನೆಯಲ್ಲಿ ವಾಸವಾಗಿದ್ದರು.
ರಾತ್ರಿ ವೇಳೆ ಬಾಲರಾಜು ಜ್ಯೋತಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಜ್ಯೋತಿಯ ಸಹೋದರಿ ಯಶೋಧಮ್ಮ ಜಗಳೂರು ಠಾಣೆಗೆ ದೂರು ನೀಡಿದ್ದು,
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.



