ದಾವಣಗೆರೆ: ದಾವಣಗೆರೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಿಖಿಲ್ ಕೊಂಡಜ್ಜಿ ಅಧಿಕ ಮತ ಗಳಿಸುವ ಮೂಲಕ ಗೆಲುವು ಸಾಧಿಸಿದ್ದಾರೆ.
ಭಾರೀ ಕುತೂಹಲ ಮೂಡಿಸಿದ್ದ ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಘೋಷಣೆಯಾಗಿದ್ದು, ನಿಖಿಲ್ ಆರ್ ಕೊಂಡಜ್ಜಿ1838 ಮತ ಪಡೆದಿದ್ದಾರೆ. ತೀವ್ರ ಸ್ಪರ್ಧೆ ನೀಡಿದ್ದ ಸಾಗರ್ ಎಲ್.ಎಚ್ 1785 ಮತಗಳನ್ನು ಪಡೆದಿದ್ದಾರೆ. ಇದರೊಂದಿಗೆ ನಿಖಿಲ್ ಕೊಂಡಜ್ಜಿ 53 ಮತಗಳಿಂದ ಜಯಗಳಿಸಿದ್ದಾರೆ. ಈ ಬಾರಿ ಕೊರೊನಾ ಹಿನ್ನೆಲೆ iyc ಆ್ಯಪ್ ಮೂಲಕ ವೋಟಿಂಗ್ ನಡೆದಿತ್ತು. ಚುನಾವಣೆಯಲ್ಲಿ ಒಟ್ಟು 7572 ಮತದಾರರ ಆನ್ ಲೈನ್ ಮುಖಾಂತರ ಮತ ಚಲಾಯಿಸಿದ್ದರು.




