ದಾವಣಗೆರೆ: ಈ ಬಾರಿಯ ಬಜೆಟ್ ನಲ್ಲಿ ‌ಜಿಲ್ಲೆಯ ನೀರಾವರಿಗೆ ಹೆಚ್ಚಿನ ಅನುದಾನ; ಯುವಕರಿಗೆ ಉದ್ಯೋಗಾವಕಾಶ – ಜಿಲ್ಲಾ‌ ಉಸ್ತುವಾರಿ ಸಚಿವ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
5 Min Read

ದಾವಣಗೆರೆ: ರಾಜ್ಯ ಬಜೆಟ್‌ನಲ್ಲಿ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ತರುತ್ತೇವೆ. 22 ಕೆರೆಗಳಿಗೆ ನೀರು ತುಂಬಿಸುವುದು, ಭೈರನಪಾದ ಯೋಜನೆಗೆ ಅನುದಾನ ಸಿಗುವ ನಿರೀಕ್ಷೆ‌‌ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.

ಕೊನೆ ಭಾಗಕ್ಕೆ ನೀರು ತಲುಪಬೇಕು

ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭದ್ರಾ‌ ಜಲಾಶಯದ ಕೊನೆಯ ಭಾಗಕ್ಕೆ ನೀರು ತಲುಪಬೇಕಿದೆ. 22 ಕೆರೆ ಏತ ನೀರಾವರಿ ಯೋಜನೆಯಲ್ಲಿ ಗುಣಮಟ್ಟದ ಪೈಪ್‌ಗಳನ್ನು ಅಳವಡಿಸಲು ಟೆಂಡರ್ ಕರೆಯಲಾಗಿದೆ. ಈ ಬಾರಿಯ ರಾಜ್ಯ ಬಜೆಟ್ ಬಗ್ಗೆ ಫೆಬ್ರವರಿಯಲ್ಲಿ ಬಜೆಟ್ ಪೂರ್ವಭಾವಿ ಸಭೆಗಳು ನಡೆಯಲಿವೆ. ಹರಿಹರ ತಾಲೂಕಿನ ಭೈರನಪಾದ ಯೋಜನೆಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗಿದ್ದು, ನೀರಾವರಿಗೆ ಹೆಚ್ಚಿನ ಅನುದಾನ ಘೋಷಿಸುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಜಿಲ್ಲೆಯ ಅಭಿವೃದ್ಧಿಗೆ ಮೊದಲ ಆದ್ಯತೆ

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 77ನೇ ಗಣರಾಜ್ಯೋತ್ಸವದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಜಿಲ್ಲೆಯ ಜನತೆಯನ್ನುದ್ದೇಶಿಸಿ ಮಾತನಾಡಿ, ದಾವಣಗೆರೆ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯೇ ಸರ್ಕಾರದ ಮೊದಲ ಆದ್ಯತೆಯಾಗಿದ್ದು, ನೀರಾವರಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ನಮ್ಮ ಸರ್ಕಾರ ಬದ್ಧವಾಗಿದೆ” ಎಂದು  ತಿಳಿಸಿದರು.

1947ರಲ್ಲಿ ಬ್ರಿಟೀಷರ ಗುಲಾಮಗಿರಿಯಿಂದ ಸ್ವಾತಂತ್ರ್ಯವಾಯಿತು. ಆದರೆ 1950ರ ಜನವರಿ 26 ರಂದು ಸಂವಿಧಾನ ಜಾರಿಗೆ ಬರುವ ಮೂಲಕ ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹೆಮ್ಮೆಗೆ ಪಾತ್ರವಾಯಿತು.ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚನೆಯಾದ ಸಂವಿಧಾನವು ನಮಗೆ ಸಮಾನತೆ, ಸ್ವಾತಂತ್ರ್ಯ ಮತ್ತು ನ್ಯಾಯವನ್ನು ನೀಡಿದೆ.

ಜಿಲ್ಲೆಯ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಲು ‘ಐ.ಟಿ. ಹಬ್’ ಮೂಲಕ ಪ್ರತಿಷ್ಠಿತ ಕಂಪನಿಗಳನ್ನು ಆಹ್ವಾನಿಸಲಾಗಿದೆ. ಇದಕ್ಕೆ ಬೇಕಾದ ಮೂಲಭೂತ ಸೌಕರ್ಯ ಮತ್ತು ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುತ್ತಿದೆ.

-ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‍

 

ಗ್ಯಾರಂಟಿ ಯೋಜನೆಗಳ ಪ್ರಗತಿ

ಶಕ್ತಿ ಯೋಜನೆ: ಜಿಲ್ಲೆಯಲ್ಲಿ ಇದುವರೆಗೆ 12.30 ಕೋಟಿ ಮಹಿಳೆಯರು ಪ್ರಯಾಣಿಸಿದ್ದು, ಇವರ ಟಿಕೆಟ್ ವೆಚ್ಚ 361.67 ಕೋಟಿ ರೂ. ಮೊತ್ತವನ್ನು ಸರ್ಕಾರ ಭರಿಸಿದೆ.

ಗೃಹಲಕ್ಷ್ಮಿ: ಜಿಲ್ಲೆಯ 3.74 ಲಕ್ಷ ಮಹಿಳೆಯರಿಗೆ ಮಾಸಿಕ 2 ಸಾವಿರದಂತೆ ಒಟ್ಟು 1690 ಕೋಟಿ ರೂ. ಜಮಾ ಮಾಡಲಾಗಿದೆ.
ಅನ್ನಭಾಗ್ಯದಡಿ ಜಿಲ್ಲೆಯ 13.95 ಲಕ್ಷ ಫಲಾನುಭವಿಗಳು ಇದರ ಲಾಭ ಪಡೆಯುತ್ತಿದ್ದು, ಫೆಬ್ರವರಿ 2025 ರಿಂದ ನಗದು ಬದಲಾಗಿ ಅಕ್ಕಿ ನೀಡಲಾಗುತ್ತಿದೆ.

ಗೃಹಜ್ಯೋತಿಯಡಿ 4.62 ಲಕ್ಷ ಕುಟುಂಬಗಳು 200 ಯುನಿಟ್ ವರೆಗೆ ಸಬ್ಸಿಡಿ ಪಡೆಯುತ್ತಿವೆ.ಯುವನಿಧಿಯಡಿ 9,858 ಪದವೀಧರರಿಗೆ 28.63 ಕೋಟಿ ರೂ. ಹಾಗೂ ಡಿಪ್ಲೊಮಾ ಪದವೀಧರರಿಗೆ 23.29 ಲಕ್ಷ ರೂ. ನಿರುದ್ಯೋಗ ಭತ್ಯೆ ನೀಡಲಾಗಿದೆ ಎಂದರು.

ಜಿಲ್ಲೆಯ 1.30 ಲಕ್ಷ ಭೂ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ಹಾವೇರಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಜಿಲ್ಲೆಯ 10 ಸಾವಿರ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗುವುದು.ಕುಡಿಯುವ ನೀರು ಪೂರೈಕೆಗೆ ವಿಶೇಷ ಆದ್ಯತೆ ನೀಡಿದ್ದು ಜಿಲ್ಲೆಯ 62 ಗ್ರಾಮಗಳು 24*7 ನೀರು ಪೂರೈಕೆ ಗ್ರಾಮಗಳೆಂದು ಘೋಷಿಸಲ್ಪಟ್ಟಿವೆ ಎಂದರು.

ದಾವಣಗೆರೆ ನಗರ ಭಾಗದಲ್ಲಿ ಏಪ್ರಿಲ್ 2026ರೊಳಗೆ ಎಲ್ಲರಿಗೂ ನಿರಂತರ ನೀರು ಒದಗಿಸಲಾಗುವುದು. ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತವಾಗಿಸಲು ಕೈಗೊಂಡ ವೈಜ್ಞಾನಿಕ ಕ್ರಮಗಳಿಂದ ದಾವಣಗೆರೆಗೆ ರಾಜ್ಯ ಮಟ್ಟದ ‘ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ’ ಲಭಿಸಿದೆ.ಜಿಲ್ಲೆಯ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಲು ‘ಐ.ಟಿ. ಹಬ್’ ಮೂಲಕ ಪ್ರತಿಷ್ಠಿತ ಕಂಪನಿಗಳನ್ನು ಆಹ್ವಾನಿಸಲಾಗಿದೆ. ಇದಕ್ಕೆ ಬೇಕಾದ ಮೂಲಭೂತ ಸೌಕರ್ಯ ಮತ್ತು ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುತ್ತಿದೆ ಎಂದರು.

ಕರ್ನಾಟಕ ಹಿಮೋಫೀಲಿಯಾ ಸೊಸೈಟಿ ಅಧ್ಯಕ್ಷರಾಗಿ ಸಾಕಷ್ಟು ಜನರ ಸೇವೆ ಮಾಡಿದ ದಾವಣಗೆರೆಯ ಡಾ.ಸುರೇಶ್ ಹಾನಗವಾಡಿ ಅವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗೆ
ಪದ್ಮಶ್ರೀ ಪ್ರಶಸ್ತಿ ಲಭಿಸಿದ್ದು ಇದು ಜಿಲ್ಲೆಯ ಹೆಮ್ಮೆ ವಿಷಯವಾಗಿದೆ, ಇವರಿಗೆ ಸರ್ಕಾರದಿಂದ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಇದನ್ನೂ ಓದಿ: ವಣಗೆರೆಯ ಡಾ.ಸುರೇಶ್ ಹನಗವಾಡಿಗೆ ಪ್ರತಿಷ್ಠಿತ ‘ಪದ್ಮಶ್ರೀ’

ಸಮಾರಂಭದಲ್ಲಿ ಸಂಸದರಾದ ಡಾ: ಪ್ರಭಾ ಮಲ್ಲಿಕಾರ್ಜುನ್ , ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಹೆಚ್.ಮಂಜಪ್ಪ, ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಮನೂರು ಟಿ.ಬಸವರಾಜ್, ಪೂರ್ವ ವಲಯ ಮಹಾನಿರೀಕ್ಷಕರಾದ ಡಾ: ಬಿ.ಆರ್.ರವಿಕಾಂತೇಗೌಡ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ , ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು, ಸ್ವಾತಂತ್ರ್ಯ ಯೋಧರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ರಾಜ್ಯದ ಕೆಲ ಜಿಲ್ಲೆಯಲ್ಲಿ ಮಳೆ ಮುನ್ಸೂಚನೆ

ಪಥಸಂಚಲನದಲ್ಲಿ ಭಾಗವಹಿಸಿದ ತಂಡ, ತಂಡದ ಮುಖ್ಯಸ್ಥರ ಹೆಸರು:

ಡಿಎಆರ್ ಪೊಲೀಸ್ ತಂಡ ಮಹೇಶ್ ಪಾಟೀಲ್, ಆರ್‍ಎಸ್‍ಐ, ಡಿಎಆರ್ ದಾವಣಗೆರೆ,ನಗರ ಉಪವಿಭಾಗ ಪೊಲೀಸ್ ತಂಡ ಸಚಿನ್ ಬಿರಾದಾರ್, ಪಿಎಸ್‍ಐ, ಆರ್‍ಎಂಸಿ ಠಾಣೆ,ಗೃಹರಕ್ಷಕ ದಳ ಆರ್. ತಿಪ್ಪೇಸ್ವಾಮಿ, ಪ್ಲಟೂನ್ ಕಮಾಂಡರ್, ಅರಣ್ಯ ರಕ್ಷಕ ದಳ ಚೇತನ್ ,ಜಿಲ್ಲಾ ಅಗ್ನಿಶಾಮಕ ದಳ ಖಾಸಿಂ ಸಾಬ್,

ಎನ್‍ಸಿಸಿ ವಿಭಾಗ:ಡಿ ಆರ್ ಎಂ ಕಾಲೇಜ್ ತಂಡ ಅಭಿಷೇಕ್, ಎ ಆರ್ ಜಿ ಕಾಲೇಜ್ ತಂಡ ಲೋಕೇಶ್, ಜಿ ಎಫ್ ಜಿ ಸಮೀರ್ ,ಡಿ ಆರ್ ಆರ್ ಗಣೇಶ್ಎವಿಕೆ (ಎನ್‍ಸಿಸಿ ಕಾಲೇಜು ವಿಭಾಗ) ಕುಮಾರಿ ಪಲ್ಲವಿ ಶಾಂತ ಕುಮಾರ್,ಜಿಎಂಐಟಿ ಕಾಲೇಜ್ ತಂಡ ಯಶ್ ರಾಜ್ ಶಿಂಧೆ,

ಸೆಂಟ್ ಪೌಲ್ ಸ್ಕೂಲ್ ಹೈಸ್ಕೂಲ್ ವಿಭಾಗ ಕುಮಾರಿ ಸಾಚಿ ಪಿ ಕೊಲ್ವಿಕಾರ್, ಪ್ಲಟೂನ್ ಕಮಾಂಡರ್, ಎಸ್‍ಟಿಜೆ(ತರಳ ಬಾಳು) ತಂಡ ಮಂಜುನಾಥ, ಭಾರತ್ ಸೇವಾದಳ ಆರ್‍ಎಂಎಸ್‍ಎ ನಿಟ್ಟುವಳ್ಳಿ ಕುಮಾರಿ ಬಿಂಧು, ಪ್ಲಟೂನ್ ಕಮಾಂಡರ್
ಭಾರತ್ ಸೌಟ್ಸ್ &ಗೈಡ್ಸ್ ಡಿಸ್ಟಿಕ್ ಟ್ರಪ್ ಗಲ್ರ್ಸ್ ಕುಮಾರಿ ಪ್ರಿಯಾ, ಎಸ್‍ಎಸ್‍ಎನ್‍ಪಿಎಸ್ ಶಾಲೆ (ಸೌಟ್ಸ್ &ಗೈಡ್ಸ್) ತನುಶ್ರೀ, ಜೈನ್ ಪಬ್ಲಿಕ್ ಸ್ಕೂಲ್ ಕುಮಾರಿ ನಿಧಿ, ಬಾಪೂಜಿ ಹೈಯರ್ ಪ್ರೈಮರಿ ಸ್ಕೂಲ್ ಕುಮಾರಿ ಸಂಜನಾ, ರಾಷ್ಟ್ರೋತ್ಥಾನ ಹೈ ಸ್ಕೂಲ್ ಕುಮಾರಿ ಜನತಾ ರಜಪೂತ ,ಮೌನೇಶರಿ ಕಿವುಡ ಮತ್ತು ಮೂಗರ ಶಾಲೆ ಕು. ಸಂಜನಾ, ಪಿ. ಎಂ. ಜವಹಾರ ನವೋದಯ ವಿದ್ಯಾಲಯ ಪವನ್, ಜಿಲ್ಲಾ ಪೊಲೀಸ್ ವಾದ್ಯ ತಂಡ ಶ್ರೀ ಹೊನ್ನೂರಪ್ಪ, ಬ್ಯಾಂಡ್ ಮಾಸ್ಟರ್ ಡಿಎಆರ್ ದಾವಣಗೆರೆ ಇವರು ಭಾಗವಹಿಸಿ ಆಕರ್ಷಕ ಪಥ ಸಂಚಲನ ಪ್ರದರ್ಶನ ನೀಡಿದರು.

ಪಥ ಸಂಚಲನ ವಿಜೇತರು; ಮೊದಲನೇ ಬಹುಮಾನ ಜಿಎಂಐಟಿ ಕಾಲೇಜ್, ದ್ವಿತೀಯ ಬಹುಮಾನ ಡಿ ಆರ್.ಎಂ.ಎಂ ಶಾಲೆ, ತೃತೀಯ ಬಹುಮಾನ ಸೆಂಟ್ ಪೌಲ್ ಶಾಲೆ. ಶಾಲಾ ವಿಭಾಗ; ಮೊದಲನೇ ಬಹುಮಾನ ಜೈನ್ ಪಬ್ಲಿಕ್ ಶಾಲೆ, ದ್ವಿತೀಯ ಬಹುಮಾನ ರಾಷ್ಟ್ರೋಸ್ಥಾನ ಶಾಲೆ, ತೃತೀಯ ಬಹುಮಾನ ಜವಹರ್ ನವೋದಯ ಶಾಲೆ ಪಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರು ಕ್ರಮವಾಗಿ ಅಬ್ದುಲ್ ಕಲಾಂ ಅಲ್ಪಸಂಖ್ಯಾತರ ಶಾಲೆ, ಬಿಡಿ ಲೇಔಟ್, ಸರ್ಕಾರಿ ಸೀತಮ್ಮ ಪ್ರೌಢಶಾಲೆ, ದಾವಣಗೆರೆ, ಮಿಲ್ಲತ್ ಪ್ರೌಢಶಾಲೆ, ದಾವಣಗೆರೆ ಪಡೆದರು.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *