ಹೊನ್ನಾಳಿ: ತಾಲ್ಲೂಕಿನವ ಮಾದೇನಹಳ್ಳಿ ಗ್ರಾಮದಲ್ಲಿ ಕುರಿ ಮೇಯಿಸುತ್ತಿದ್ದ 25 ವರ್ಷದ ಚತುರಲಿಂಗಯ್ಯ ಸಿಡಿಲು ಬಡಿದು ಸ್ಥಳದಲ್ಲಿಯೆ ಸಾವನ್ನಪ್ಪಿದ್ದಾನೆ.
ಮೂಲತಃ ತುಮಕೂರಿನ ಶಿರಾ ತಾಲ್ಲೂಕಿನ ಗಿಣ್ಣಪ್ಪನಹಳ್ಳಿ ನಿವಾಸಿಯಾದ ಯುವಕ, ನಾಲ್ಕೈದು ತಿಂಗಳ ಹಿಂದೆ ಕುರಿ ಮೇಯಿಸುವುದಕ್ಕಾಗಿ ಬಂದಿದ್ದನು. ಮಾದೇನಹಳ್ಳಿಯಲ್ಲಿ ಕುರಿ ಮೇಯಿಸುವಾಗ ಭಾರೀ ಗುಡುಗು,ಸಿಡಿಲು, ಮಳೆಯಿಂದ ರಕ್ಷಣೆ ಪಡೆಯಲು ಮರದ ಕೆಳಗೆ ಹೋಗಿದ್ದಾನೆ. ಈ ವೇಳೆ ಫೋನ್ ನಲ್ಲಿ ಮಾತನಾಡುವಾಗ ಈ ಆಘಾತ ಸಂಭವಿಸಿದೆ.
ಈ ವಿಷಯ ತಿಳಿದ ಶಾಸಕ ರೇಣುಕಾಚಾರ್ಯ ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ.