ದಾವಣಗೆರೆ: ಜಿಲ್ಲೆಯ ಹೊನ್ನಾಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಸ್ನಾನದ ಕೋಣೆಯ ಬಕೆಟ್‌ನಲ್ಲಿ ನವಜಾತ ಹೆಣ್ಣು ಶಿಶವೊಂದು ಪತ್ತೆಯಾಗಿದ್ದು, ಮಗುವಿನ ಪೋಷಕರ ಪತ್ತೆಗೆ ದೂರು ದಾಖಲಿಸಲಾಗಿದೆ.
ನವಜಾತ ಶಿಶುವನ್ನು ಹೊಕ್ಕಳು ಬಳ್ಳಿ ಸಮೇತ ಬಟ್ಟೆ ಸುತ್ತಿ ಬಕೆಟ್‌ನಲ್ಲಿ ಇಟ್ಟು ತಾಯಿ ನಾಪತ್ತೆಯಾಗಿದ್ದಾರೆ. ಬೆಳಿಗ್ಗೆ ಆಸ್ಪತ್ರೆ ಸ್ವಚ್ಛತಾ ಸಿಬ್ಬಂದಿ ಸ್ವಚ್ಛತೆಗೆ ಹೋಗಿದ್ದಾಗ ಬಕೆಟ್ ನಲ್ಲಿ ನವಜಾತ ಶಿಶು ಪತ್ತೆಯಾಗಿದೆ. ತಕ್ಷಣ ತುರ್ತು ಚಿಕಿತ್ಸಾ ವಿಭಾಗಕ್ಕೆ ಕರೆದುಕೊಂಡು ಹೋಗಿ ಪರಿಶೀಲಿಸಿ ಶಿಶುವನ್ನು
ಹೆರಿಗೆ ವಿಭಾಗಕ್ಕೆ ದಾಖಲಿಸಿಶಿಶುವಿನ ಆರೈಕೆ ಮಾಡಿದ್ದಾರೆಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಚಂದ್ರಪ್ಪ ಮಾಹಿತಿ ನೀಡಿದ್ದಾರೆ. ಈಗಾಗಲೇ ಪೊಲೀಸರಿಗೆ ದೂರು ನೀಡಿದ್ದು, ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಮಗುವನ್ನು ಜಿಲ್ಲಾ ಆಸ್ಪತ್ರೆಗೆ ವರ್ಗಾವಣೆ
ಮಾಡಿಕೊಂಡು ಪೋಷಕರ ಪತ್ತೆಗೆ ದೂರು ನೀಡಲಾಗುವುದು.ದಾವಣಗೆರೆ ಸರ್ಕಾರಿ ವಿಶೇಷ ದತ್ತು ಕೇಂದ್ರದಲ್ಲಿ ಇರಿಸಲಾಗಿದೆ.



