ದಾವಣಗೆರೆ: ಸದಾ ಕ್ರಿಯಾಶೀಲರಾಗಿ ಓಡಾಡುತ್ತಿದ್ದ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರು ಮುಂಬೈ ಆಸ್ಪತ್ರೆಯಲ್ಲಿ ಕಾಲು ನೋವಿನ ಆರೇಷನ್ ಗೆ ಒಳಗಾಗಿದ್ದಾರೆ. ಹೀಗಾಗಿ 15 ದಿನ ಕ್ಷೇತ್ರದಿಂದ ದೂರ ಇರಲಿದ್ದು, ವಿಶ್ರಾಂತಿಯಲ್ಲಿ ತೆಗೆದುಕೊಳ್ಳಲಿದ್ದಾರೆ.
ಕಳೆದ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಸಂಭವಿಸಿದ್ದ ಅಪಘಾತದಿಂದಾಗಿ ಕಳೆದ ಕೆಲ ತಿಂಗಳಿಂದ ಕಾಲು ನೋವು ಕಾಣಿಸಿಕೊಂಡಿದ್ದು, ವೈದ್ಯರ ಸಲಹೆ ಮೇರೆಗೆ ಮುಂಬೈ ಆಸ್ಪತೆಯಲ್ಲಿ ಆಪರೇಷನ್ ಗೆ ಒಳಗಾಗಿದ್ದೇನೆ. ನಿಮ್ಮೆಲ್ಲರ ಹಾರೈಕೆ ಹಾಗೂ ಆಶೀರ್ವಾದದಿಂದ ಗುಣಮುಖನಾಗುತ್ತಿದ್ದು ವೈದ್ಯರ ಸಲಹೆ ಮೇರೆಗೆ ಮುಂದಿನ 15 ದಿನಗಳು ಬೆಂಗಳೂರಿನ ಆಯುರ್ವೇದಿಕ್ ಆಸ್ಪತೆಗೆ ದಾಖಲಾಗುತ್ತಿದ್ದು, ನಿಮ್ಮ ಅಹವಾಲುಗಳಿಗೆ ದೂರವಾಣಿ ಮೂಲಕ ನನ್ನ ಆಪ್ತ ಸಹಾಯಕರು ಸ್ಪಂದಿಸಲಿದ್ದು, ಸಹಕರಿಸಬೇಕಾಗಿ ವಿನಯಪೂರ್ವಕವಾಗಿ ವಿನಂತಿಸುತ್ತೇನೆ ಎಂದು ಶಾಸಕ ಎಂ.ಪಿ ರೇಣುಕಾಚಾರ್ಯ ತಿಳಿಸಿದ್ಧಾರೆ.



