ದಾವಣಗೆರೆ; ಹೊನ್ನಾಳಿ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಕೆಎಸ್ ಆರ್ ಟಿಸಿ ಬಸ್ ಮತ್ತು ಕಾರು ನಡುವೆ ಭೀಕರ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಮೂವರಿಗೆ ಗಂಭೀರ ಗಾಯಗಳಾಗಿವೆ. ಬಸ್ ಗುದ್ದಿದ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ.
ಹೊನ್ನಾಳಿಯ ದಿಡಗೂರು,ಹರಳಹಳ್ಳಿ ಸಮೀಪ ಈ ಘಟನೆ ನಡೆದೆ. ಕೆಎಸ್ ಆರ್ ಟಿಸಿ ಇನೋವಾ ಕಾರಿಗೆ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕಾರಿನಲ್ಲಿದ್ದ ರಾಜು ಗೌಡ (54) ಮೃತಪಟ್ಟಿದ್ದಾರೆ. ಕಿರಿಯ ಪುತ್ರ ರಾಜೇಶ್ ಗೌಡ, ರಾಜುಗೌಡ ಪತ್ನಿ ಗೌರಮ್ಮ ಹಾಗೂ ದ್ವಿತೀಯ ಪುತ್ರನಿಗೆ ಗಂಭೀರ ಗಾಯಗಳಾಗಿವೆ. ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



