ದಾವಣಗೆರೆ: ಕೃಷಿ ಇಲಾಖೆಯಿಂದ ಗಿರಣಿ, ಕಾರಪುಡಿ, ಶಾವಿಗೆ, ಗಾಣ, ರಾಗಿ ಕ್ಲೀನಿಂಗ್ ಯಂತ್ರ ಸೇರಿ ಕೃಷಿ ಯಂತ್ರೋಪಕರಣ ಸಹಾಯಧನಕ್ಕೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೃಷಿ ಯಂತ್ರೋಪಕರಣ ಯೋಜನೆಯಡಿ ಜಿಲ್ಲೆಯ ಹೊನ್ನಾಳಿಯ ತಾಲ್ಲೂಕು ರೈತರು ಭೂಮಿ ಸಿದ್ಧತೆ, ಬಿತ್ತನೆ, ಕೂರಿಗೆ ಮತ್ತು ಕೃಷಿಗೆ ಸಂಬಂಧಿಸಿದ ಇತರೆ ಉಪಕರಣಗಳನ್ನು ಪಡೆಯಬಹುದು. ಇದಲ್ಲದೆ, ತುಂತುರು ನೀರಾವರಿ ಘಟಕಗಳು ಹಾಗೂ ಕೃಷಿ ಸಂಸ್ಕರಣೆ ಯೋಜನೆಯಡಿ ಹಿಟ್ಟಿನ ಗಿರಣಿ, ಕಾರಪುಡಿ ಯಂತ್ರ, ಶಾವಿಗೆ ಯಂತ್ರ, ಎಣ್ಣೆ ಗಾಣ, ರಾಗಿ ಕ್ಲೀನಿಂಗ್ ಯಂತ್ರ ಮುಂತಾದ ಸಂಸ್ಕರಣಾ ಘಟಕಗಳನ್ನು ಖರೀದಿಸಲು ಅವಕಾಶವಿದೆ.
ಶೇ. 90ರಷ್ಟು ರಿಯಾಯಿತಿ
ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಸಾಮಾನ್ಯ ರೈತರಿಗೆ ಶೇ.50 ಮತ್ತು ಎಸ್‌ಸಿ/ಎಸ್‌ಟಿ ರೈತರಿಗೆ ಶೇ.90 ಸಹಾಯಧನದೊಂದಿಗೆ ಈ ಘಟಕಗಳನ್ನು ವಿತರಿಸಲಾಗುವುದು ಎಂದು ಹೊನ್ನಾಳಿ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.