ದಾವಣಗೆರೆ: ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕಿನ ಜಂಗಮ ಸಮಾಜದಿಂದ 2023 – 24ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ, ಪಿಯುಸಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಉತ್ತೀರ್ಣರಾದ ಬೇಡ ಜಂಗಮ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
2023-24ನೇ ಸಾಲಿನಲ್ಲಿ ಎಸ್ ಎಸ್ ಎಲ್ಸಿ, ಪಿಯುಸಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಉತ್ತೀರ್ಣರಾದ ಬೇಡ ಜಂಗಮ ಸಮಾಜದ ವಿದ್ಯಾರ್ಥಿಗಳು ಅಂಕಪಟ್ಟಿ ಜೆರಾಕ್ಸ್, ಆಧಾರ್‌ಕಾರ್ಡ್ ಜೆರಾಕ್ಸ್, ಮತ್ತು ತಮ್ಮ ಮೊಬೈಲ್ ನಂಬರ್‌ನೊಂದಿಗೆ ಜು.20ರೊಳಗೆ ಸಂಘದ ಕಾರ್ಯದರ್ಶಿಗಳಾದ ರುದ್ರಸ್ವಾಮಿ ಕುಳಗಟ್ಟೆ (9731396571) ದಯಾನಂದ ಸ್ವಾಮಿ (9731331855) ಎನ್. ಎಂ. ವಿನಯ್ ಕುಮಾರ್‌ನ್ಯಾಮತಿ (9916061606), ಅಥವಾ ಹಾಲಸ್ವಾಮಿ ದೊಡೇರಿ (9481091215) ಅವರನ್ನು ಸಂಪರ್ಕಿಸಬಹುದು.
ಜುಲೈ 28ರಂದು ಭಾನುವಾರ ಬೆಳಿಗ್ಗೆ 11 ಗಂಟೆಗೆ ಹೊನ್ನಾಳಿ ಶ್ರೀ ಚನ್ನಪ್ಪಸ್ವಾಮೀಜಿ ಹಿರೇಕಲ್ಮಠದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಬೇಡ ಜಂಗಮ ಸಮಾಜ ಸೇವಾ ಸಂಘದ ವಕ್ತಾರ ಎಂ.ಎಸ್. ಶಾಸ್ತ್ರೀ ಹೊಳೆಮಠ್ ತಿಳಿಸಿದ್ದಾರೆ.



