ದಾವಣಗೆರೆ: ಜಿಲ್ಲೆಯ ಗೃಹ ರಕ್ಷಕದಳದ ವಿವಿಧ ಘಟಕಗಳಲ್ಲಿ ಖಾಲಿ ಇರುವ ಸ್ವಯಂಸೇವಕ ಪುರುಷ ಗೃಹರಕ್ಷಕರ ಹುದ್ದೆ ಭರ್ತಿ ಮಾಡಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಿದೆ.
ಎಲ್ಲೆಲ್ಲಿ ಖಾಲಿ ಇದೆ..?: ಹರಿಹರ (19), ಮಲೆಬೆನ್ನೂರು (01), ಹೊನ್ನಾಳಿ (07), ನ್ಯಾಮತಿ (14), ಚನ್ನಗಿರಿ (25), ಸಂತೆಬೆನ್ನೂರು (06), ಜಗಳೂರು (04), ಬಿಳಿಚೋಡು (22), ಬಸವನಕೋಟೆ (12) ಹುದ್ದೆಗಳು ಖಾಲಿ ಇವೆ. ಏ.24 ರಿಂದ ಜೂ.14ರ ವರೆಗೆ ಅರ್ಜಿಗಳನ್ನು ಪಡೆದು ಭರ್ತಿ ಮಾಡಿ ಜೂ.16 ರೊಳಗೆ ಜಿಲ್ಲಾ
ಸಮಾದೇಷ್ಟರ ಕಚೇರಿ, ದೇವರಾಜ ಅರಸ್ ಬಡಾವಣೆ ಬಿ ಬ್ಲಾಕ್, ಶಿವಪಾರ್ವತಿ ಕಲ್ಯಾಣ ಮಂಟಪ ಪಕ್ಕ, ಶಿವಾಲಯ ಹಿಂಭಾಗ, ದಾವಣಗೆರೆ ಹಾಗೂ ತಾಲೂಕು/ಉಪ ಘಟಕಗಳಲ್ಲಿಯೂ ಅರ್ಜಿ ಪಡೆದು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಸಮಾದೇಷ್ಟರ ಕಚೇರಿ ಸಂಪರ್ಕಿಸಬಹುದಾಗಿದೆ.