ದಾವಣಗೆರೆ: ಜೂನ್ 18 ರಂದು ಮಧ್ಯಾಹ್ನ 1.30ಕ್ಕೆ ನಗರದ ಜಿಲ್ಲಾ ಪೊಲೀಸ್ ಸಶಸ್ತ್ರ ಮೀಸಲು ಪಡೆ ಕವಾಯತು ಮೈದಾನದಲ್ಲಿ ಗೃಹರಕ್ಷಕ ದಳ ನೇಮಕಾತಿಗೆ ದೈಹಿಕ ಪರೀಕ್ಷೆ ನಡೆಯಲಿದೆ.
ಜಿಲ್ಲೆಯ ವಿವಿಧ ತಾಲ್ಲೂಕು ಮತ್ತು ಉಪಘಟಕಗಳಲ್ಲಿ ಖಾಲಿ ಇರುವ 110 ಗೃಹರಕ್ಷಕ ನೇಮಕಾತಿಗಾಗಿ ವಿವಿಧ ಘಟಕಗಳಿಂದ ಪುರಸ್ಕೃತಗೊಂಡಿರುವ 203 ಅಭ್ಯರ್ಥಿಗಳ ದೈಹಿಕ ಪರೀಕ್ಷೆ ನಡೆಯಲಿದೆ. ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಗೃಹ ರಕ್ಷಕದಳ ಆಯ್ಕೆ ಸಮಿತಿಯ ಅಧ್ಯಕ್ಷರ ಸಮ್ಮುಖದಲ್ಲಿ ನಡೆಯಲಿದೆ ಎಂದು ಜಿಲ್ಲಾ ಕಮಾಂಡೆಂಟ್ ಡಾ.ಸುಜಿತ್ ಕುಮಾರ್ ಎಸ್.ಹೆಚ್ ತಿಳಿಸಿದ್ದಾರೆ.