Connect with us

Dvgsuddi Kannada | online news portal | Kannada news online

ದಾವಣಗೆರೆಯಲ್ಲಿ ಅದ್ಧೂರಿ ಹೋಳಿ ಸಂಭ್ರಮ; ಮೈ ಮರೆತು ಕುಣಿದು ಕುಪ್ಪಳಿಸಿದ ಯುವ ಸಮೂಹ..!

ದಾವಣಗೆರೆ

ದಾವಣಗೆರೆಯಲ್ಲಿ ಅದ್ಧೂರಿ ಹೋಳಿ ಸಂಭ್ರಮ; ಮೈ ಮರೆತು ಕುಣಿದು ಕುಪ್ಪಳಿಸಿದ ಯುವ ಸಮೂಹ..!

ದಾವಣಗೆರೆ: ಈ ಬಾರಿ ಹೋಳಿ ಹಬ್ಬದ ಜೋಶ್ ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ತುಸು ಜೋರಾಗಿಯೇ ಇತ್ತು. ನಗರದೆಲ್ಲಡೆ  ಯುವ ಸಮೂಹ ಒಬ್ಬರಿಗೊಬ್ಬರು ಬಣ್ಣದೋಕುಳಿ ಹಚ್ಚಿ, ಡಿಜೆ ಹಾಡಿಗೆ ಮೈ ಮರೆತು ಕುಣಿದು ಸಂಭ್ರಮಿಸಿದರು.

ಬಣ್ಣ ಬಣ್ಣದ ಓಕಳಿಯನ್ನು ಒಬ್ಬರಿಗೊಬ್ಬರು, ಹಚ್ಚುತ್ತಾ, ನಗರದ ಪ್ರಮುಖ ರಸ್ತೆಗಳಿಂದ ಯುವ ಸಮೂಹ ರಾಮ್ ಅಂಡ್ ಕೋ ಸರ್ಕಲ್ ಕಡೆ ಬರತೊಡಗುತ್ತಿದ್ದಂತೆ ಸರ್ಕಲ್‌ಗೆ ಒಂದು ಕಳೆ ಬಂದಿತ್ತು. ಮಧ್ಯಾಹ್ನದವರೆಗೆ ಯುವಕ – ಯುವತಿಯರು ಕುಣಿದು ಕುಪ್ಪುಳಿಸಿದರು. ಒಬ್ಬರಿಗೊಬ್ಬರು ಬಣ್ಣದೋಕುಳಿ ಎರಚಿ  ಸಂಭ್ರಮಿಸಿದರು.  ಡಿಜೆ ಸೌಂಡ್.., ಹಾಡಿಗೆ ತಕ್ಕಂತೆ ಹೆಜ್ಜೆ ಹಾಕಿದ ಯುವಕ-ಯುವತಿಯರು.. ಜೋರು ಕೇಕೆ..‌ಹಾಕಿ ಕುಣಿದು ಕುಪ್ಪಳಿಸಿದರು. ನೃತ್ಯದ ಅಬ್ಬರ ರಂಗೇರುತ್ತಿದ್ದಂತೆ ಪಡ್ಡೆ ಹುಡುಗರು ಅಂಗಿಯನ್ನು ಹರಿದು ಮೇಲಕ್ಕೆ ಎಸೆದರು.

ಹೋಳಿ ಹುಣ್ಣಿಮೆ ನಿನ್ನೆ (ಮಾ.24) ರಾತ್ರಿ ಕಾಮದಹನ ಮಾಡಿದ ಬಳಿಕ ಬಣ್ಣದೋಕುಳಿಯ ಸಂಭ್ರಮಕ್ಕೆ ಚಾಲನೆ ದೊರೆತಿತ್ತು. ಮಕ್ಕಳು, ಯುವಕರು ಬಣ್ಣ ಹಚ್ಚಿಕೊಂಡರು. ಯುವತಿಯರೂ ಇದಕ್ಕೆ ಸಾಥ್‌ ನೀಡಿದ್ದರು.

ನಗರದ ಜೆ.ಜೆ.ಎಂ. ವೈದ್ಯಕೀಯ ಕಾಲೇಜ್‌, ಯುಬಿಡಿಟಿ ಕಾಲೇಜು, ಬಿಐಇಟಿ ಕಾಲೇಜು ಸಹಿತ ವಿವಿಧ ಹಾಸ್ಟೆಲ್‌ಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಬಣ್ಣದಾಟದಲ್ಲಿ ಮುಳುಗಿದ್ದರು. ಇನ್ನೂ‌ ಪಿ.ಜೆ. ಬಡಾವಣೆ, ಎಂಸಿಸಿ ‘ಬಿ’ ಬ್ಲಾಕ್‌, ವಿನೋಬನಗರ, ವಿದ್ಯಾನಗರ, ಶಿವಕುಮಾರಸ್ವಾಮಿ ಬಡಾವಣೆ, ಬಿಐಇಟಿ ರಸ್ತೆ, ನಿಜಲಿಂಗಪ್ಪ ಬಡಾವಣೆ, ಬಿಡಿಟಿ ರಸ್ತೆ, ಮೆಡಿಕಲ್‌ ಕಾಲೇಜು ಹಾಸ್ಟೆಲ್‌ ರಸ್ತೆ, ಸಿದ್ದವೀರಪ್ಪ ಬಡಾವಣೆ, ಗಡಿಯಾರ ಕಂಬ, ಹಳೆ ದಾವಣಗೆರೆ, ಆಂಜನೇಯ ಬಡಾವಣೆ, ಪಿಸಾಳೆ ಕಾಂಪೌಂಡ್‌, ಗಾಂಧಿ ವೃತ್ತ, ವಿನೋಬನಗರ, ಕಾಯಿಪೇಟೆ, ನಿಟುವಳ್ಳಿಯಲ್ಲಿ ಹೋಳಿ ಆಚರಣೆ ಜೋರಾಗಿತ್ತು.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top