ದಾವಣಗೆರೆ: ಹೋಳಿ ಹಬ್ಬವನ್ನು ಖಾಸಗಿಯಾಗಿ ಆಚರಿಸಲು ಯಾವುದೇ ಅಡೆತಡೆಗಳಿಲ್ಲ. ಆದರೆ, ಸಾವಿರಾರು ಜನ ಒಂದೆಡೆ ಸೇರಿ ಡಿಜೆ ಬಳಸಿ ಡ್ಯಾನ್ಸ್ ಮಾಡುವುದು, ಪೈಪ್ ಬಳಸಿ ನೀರಿನ ಓಕಳಿ ಆಡುವುದನ್ನು ನಿಷೇಧಿಸಿದ್ದು, ನಿಯಮ ಉಲ್ಲಂಘನೆಯಾದಲ್ಲಿ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಲಾಗುವುದು. ಹಾಗೂ ಈ ಕಾರ್ಯಕ್ರಮದ ಆಯೋಜಕರಿಗೆ ರೂ.10 ಸಾವಿರ ದಂಡ ವಿಧಿಸಲಾಗುವುದು.
ಗುರುವಾರ ಜಿಲ್ಲಾ ಪೊಲೀಸ್ ಸಭಾಂಗಣದಲ್ಲಿ ಹೋಳಿ, ಷಬ್-ಎ ಬಾರತ್ ಮತ್ತು ಮಹಾನಗರ ಪಾಲಿಕೆ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆ ಪ್ರಯುಕ್ತ ಹಮ್ಮಿಕೊಂಡಿದ್ದ ನಾಗರಿಕ ಸೌಹಾರ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು
ಮಾ.28 ಕ್ಕೆ ಹಿಂದುಗಳು ಕಾಮನನ್ನು ಸುಟ್ಟರೆ, ಮುಸ್ಲಿಂ ಬಾಂಧವರು ಖಬ್ರಸ್ಥಾನಕ್ಕೆ ತೆರಳಿ ಪ್ರಾರ್ಥನೆ ಮಾಡಿ ಜಾಗರಣೆ ಮಾಡುತ್ತಾರೆ. ಮಾ.29 ರಂದು ಮಹಾನಗರಪಾಲಿಕೆಯ ವಾರ್ಡ್ ನಂಬರ್ 20 ಮತ್ತು 22 ರಲ್ಲಿ ಉಪ ಚುನಾವಣೆ ಇದೆ ಹಾಗೂ ದಾವಣಗೆರೆ ತಾಲ್ಲೂಕಿನಲ್ಲಿ 3 ಹಾಗೂ ಹೊನ್ನಾಳಿ ತಾಲ್ಲೂಕಿನಲ್ಲಿ 01 ಗ್ರಾಮ ಪಂಚಾಯಿತಿ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಈ ಎಲ್ಲಾ ಚಟುವಟಿಕೆಗಳನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ನಡೆಸಿಕೊಂಡು ಹೋಗಬೇಕಿದೆ ಎಂದರು.