ದಾವಣಗೆರೆ : ದಾವಣಗೆರೆ ತಾಲ್ಲೂಕು ಹೆಬ್ಬಾಳು ಗ್ರಾಮ ಪಂಚಾಯಿತಿಯ ಹೆಬ್ಬಾಳು-1 ಮತ್ತು ಹೆಬ್ಬಾಳು-2 ಕ್ಷೇತ್ರಗಳಿಗೆ ಮತದಾರರ ಪಟ್ಟಿಯನ್ನು ಸರಿಪಡಿಸಿಕೊಂಡು ಮರುಮತದಾನ ನಡೆಸುವಂತೆ ರಾಜ್ಯ ಚುನಾವಣಾ ಆಯೋಗವು ಆದೇಶಿಸಿದ್ದು, ಅದರಂತೆ ನಾಳೆ ( ಡಿ. 29) ಮರು ಮತದಾನ ನಡೆಯಲಿದೆ.
ಹೆಬ್ಬಾಳು-1 ಮತ್ತು ಹೆಬ್ಬಾಳು-2 ಕ್ಷೇತ್ರಗಳಿಗೆ ಮತಗಟ್ಟೆ ಸಂಖ್ಯೆ.108 ಮತ್ತು 109 ರಲ್ಲಿ ಡಿ. 29 ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಮರು ಮತದಾನ ನಡೆಸಲಾಗುವುದು. ಅಂದು ಜರುಗುವ ಮತದಾನದಲ್ಲಿ ಮತ ಚಲಾವಣೆ ಮಾಡಿದ ಮತದಾರ ಎಡಗೈ ಹೆಬ್ಬಾರಳಿಗೆ ಅಳಿಸಲಾಗದ ಶಾಹಿ ಗುರುತು ಮಾಡಲಾಗುವುದೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



