ದಾವಣಗೆರೆ: ನಿನ್ನೆ ರಾತ್ರಿ (ಅ. 01) ಜಿಲ್ಲೆಯಾದ್ಯಂತ ಗುಡುಗು, ಸಿಡಿಲು ಸಹಿತ ಭಾರಿ ಮಳೆ ಸುರಿದಿದೆ. ಇದರಿಂದ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ದಾವಣಗೆರೆಯ ದೊಡ್ಡ ಹಳ್ಳಿ ತುಂಬಿ ಹರಿಯುತ್ತಿದ್ದು, ಭತ್ತ, ಮಕ್ಕೆಜೋಳ ಬೆಳೆಗೆ ಹಾನಿ ಸಂಭವಿಸಿದೆ.
ಕಳೆದ ಒಂದು ತಿಂಗಳಿಂದ ಬಿಡುವು ನೀಡಿದ್ದ ಮಳೆ ನಿನ್ನೆ ರಾತ್ರಿ ಇದ್ದಕ್ಕಿದಂತೆ ಭಾರಿ ಪ್ರಮಾಣ ಸುರಿದಿದೆ. ಇದರಿಂದ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ನಿನ್ನೆ ಸಂಜೆ 7 ಗಂಟೆಯಿಂದ ಶುರುವಾದ ಮಳೆ ತಡ ರಾತ್ರಿವರಿಗೂ ಸುರಿದಿದೆ. ದಾವಣಗೆರೆ ನಗರ ಪ್ರದೇಶದ ನೀರು ದೊಡ್ಡ ಹಳ್ಳದ ಮೂಲ ಭಾರಿ ಪ್ರಮಾಣದಲ್ಲಿ ಹರಿಯುತ್ತಿದೆ. ಹೀಗಾಗಿ ದೊಡ್ಡ ಹಳ್ಳ ಉಕ್ಕಿ ಹರಿಯುತ್ತಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಭತ್ತ, ಮೆಕ್ಕೆಜೋಳ ಬೆಳೆಗೆ ಹಾನಿಯಾಗಿದೆ.
ಇನ್ನು ಮಕ್ಕೆಜೋಳ ಕಟಾವಿಗೆ ಬಂದಿದ್ದು, ಅಕಾಲಿಕ ಮಳೆಯಿಂದ ರೈತರು ಕಂಗಾಲು ಆಗಿದ್ದಾರೆ. ಇಷ್ಟು ದಿನ ಬಾರದ ಮಳೆ, ಈಗ ಬಂದಿದೆ. ಈ ಮಳೆಯಿಂದ ಅಲ್ಪ-ಸ್ವಲ್ಪ ಬೆಳೆದ ಬೆಳೆ, ಮಳೆಗೆ ಹಾನಿ ಆಗುತ್ತಿದೆ ಎಂದು ರೈತರು ಅಳಲು ತೊಡಿಕೊಂಡಿದ್ದಾರೆ.