ದಾವಣಗೆರೆ: ತಾಲ್ಲೂಕಿನ ನಲ್ಕುಂದ ಗ್ರಾಮದ ಬಳಿ ಭದ್ರಾ ನಾಲೆಯ ತೊಟ್ಟಿಲು ಕುಸಿದು ಬಿದ್ದಿದ್ದು, ಸ್ಥಳಕ್ಕೆ ಜಿಲ್ಲಾಧಿಕಾರಿ ಶಿವಾನಂದ್ ಕಾಪಶಿ ಭೇಟಿ ನೀಡಿ ಹಾನಿಗೊಳಗಾದ ಪ್ರದೇಶ ವೀಕ್ಷಿಸಿದರು.
ನಾಲೆಯ ತೊಟ್ಟಿಲಯ ಮುರಿದು ಹೋಗಿದ್ದು, ತಕ್ಷಣವೇ ಇದರ ಕಾಮಗಾರಿಯ ಕೈಗೆತ್ತಿಕೊಳ್ಳುವಂತೆ ನೀರಾವರಿ ನಿಗಮದ ಎಂ.ಡಿ ಮಲ್ಲಿಕಾರ್ಜುನ ಗುಂಗೆ ಅವರಿಗೆ ದೂರವಾಣಿ ಮೂಲಕ ತಿಳಿಸಿದರು. ತಕ್ಷಣ ಕ್ರಮ ಕೈಗೊಳ್ಳಬೇಕು ಇಲ್ಲದಿಲ್ಲದೆ ರೈತರಿಗೆ ಸಾಕಷ್ಟು ತೊಂದರೆ ಆಗಲಿದೆ. ಹೀಗಾಗಿ ಕೂಡಲೇ ಮ ಕಾಮಗಾರಿ ಕೈಗೆತ್ತಿಕೊಳ್ಳಲು ತಿಳಿಸಿದರು.

ಉಪವಿಭಾಗಾಧಿಕಾರಿಗಳಾದ ದುರ್ಗಾಶ್ರೀ, ತಹಶೀಲ್ದಾರ್ ಬಸವನಗೌಡ, ನೀರಾವರಿ ಇಲಾಖೆಯ ಅಧಿಕಾರಿಗಳು ಸೇರಿದಂತೆ ರೈತ ಸಂಘದ ಮುಖಂಡರು ಹಾಗೂ ಗ್ರಾಮಸ್ಥರು ಇದ್ದರು.
ಬಾಡಾದಿಂದ ನಲ್ಕುಂದ ವರೆಗೆ 7 ಕಿಲೋಮೀಟರ್ ನಿರ್ಮಿಸಿರುವ ಈ ತೊಟ್ಟಿಲು ಶನಿವಾರ ರಾತ್ರಿ ಸುರಿದ ಭಾರೀ ಮಳೆಗೆ ಕುಸಿದು ಬಿದ್ದಿದೆ. ಇದರಿಂದ ಅಪಾರ ಪ್ರಮಾಣದ ನೀರು ಸೋರಿಕೆಯಾಗುತ್ತಿದೆ. ಈ ನೀರು ಹಳ್ಳಕ್ಕೆ ಹರಿಯುತ್ತಿದ್ದು, ಹಳ್ಳ ಉಕ್ಕಿ ಹರಿಯುತ್ತಿರುವುದರಿಂದ ಶ್ಯಾಗಲೆ ಸಂಪರ್ಕ ಕಡಿತಗೊಂಡಿದೆ. ಈ ಕಾಲುವೆಯಿಂದ ದಾವವಣಗೆರೆ ಭಾಗಕ್ಕೆ ಪೂರೈಕೆ ಆಗುವ ನೀರಿನಲ್ಲಿ ವ್ಯತ್ಯ ಉಂಟಾಗಿದ್ದು, ಮುರಿದು ಬಿದ್ದ ತೊಟ್ಟಿಲು ಕೂಡಲೇ ಸರಿಪಡಿಸದಿದ್ದರೆ ಈ ಬಾರಿಯ ಭತ್ತದ ಬೆಳೆಗೆ ಸಮಯಕ್ಕೆ ಸರಿಯಾಗಿ ನೀರು ಪೂರೈಕೆ ಆಗದಿರುವ ಸಂಕಷ್ಟ ರೈತರಲ್ಲಿ ಮೂಡಿದೆ.



