ದಾವಣಗೆರೆ: ಶ್ರೀ ಭಗವಾನ್ ಮಹಾವೀರ್ ಜೈನ್ ಜನ್ಮ ಕಲ್ಯಾಣ ನಿಮಿತ್ತ ಬಿಪಿಎಲ್ ಕಾರ್ಡ್ ಹೊಂದಿವರಿಗೆ ಪಿಜೆ ಬಡಾವಣೆಯ ಎವಿಕೆ ಕಾಲೇಜ್ ರಸ್ತೆಯ ಶ್ರೀ ಭಗವಾನ್ ಮಹಾವೀರ ಜೈನ್ ಆಸ್ಪತ್ರೆಯಲ್ಲಿ ಒಳ ರೋಗಿಗಳಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಗುವುದು ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದೆ.
ಸಾಮಾನ್ಯ ರೋಗಿಗಳು, ಅಸ್ತಮಾದಿಂದ ಬಳಲುತ್ತಿರುವ ಬಡ ಮತ್ತು ನಿಶಕ್ತ ರೋಗಿಗಳಿಗೆ ಯಾವುದೇ ಪ್ರವೇಶ ಶುಲ್ಕವಿಲ್ಲದೆ, ವೈದ್ಯಕೀಯ ತಪಾಸಣೆ ನಡೆಸಿ ಔಷಧಿಗಳನ್ನು ಸಹ ಉಚಿತವಾಗಿ ನೀಡಲಾಗುವುದು. ರೋಗಿಗಳು ಆಸ್ಪತ್ರೆಗೆ ಬರುವಾಗ ಬಿಪಿಎಲ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ತರುವುದು ಕಡ್ಡಾಯವಾಗಿದೆ. ವಿಳಾಸ: #47/01 ( ಹಳೇ ಅಶ್ವಿನಿ ಆಸ್ಪತ್ರೆ) ಎವಿಕೆ ಕಾಲೇಜ್ ರಸ್ತೆ, ಪಿ.ಜೆ ಬಡಾವಣೆ, ದಾವಣಗೆರೆ. ಹೆಚ್ಚಿನ ಮಾಹಿತಿಗೆ 08192258727,258677, ಮೊಬೈಲ್ :9606048422,9606048423 ಸಂಪರ್ಕಿಸಿ.