ದಾವಣಗೆರೆ: ನಗರದ ಲಯನ್ಸ್ ಕ್ಲಬ್ ವತಿಯಿಂದ ರಾಜ್ಯಪಾಲ ಲ. ವಿಶ್ವನಾಥ ಶೆಟ್ಟಿ ಎಂ.ಜೆ.ಎಫ್. ಅವರ ಅಧಿಕೃತ ಭೇಟಿಯ ನಿಮಿತ್ತ ಹಲವಾರು ಸೇವಾ ಕಾರ್ಯಕ್ರಮಗಳನ್ನು ದಾವಣಗೆರೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಶ್ರವಣದೋಷವುಳ್ಳ ಮಕ್ಕಳಿಗಾಗಿ ಉಚಿತ ಚಿಕಿತ್ಸಾ ಶಿಬಿರ ಮತ್ತು ಹಿರಿಯ ನಾಗರಿಕರಿಗೆ ಉಚಿತ ಶ್ರವಣ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿದೆ.
ಮಾ. 31 ಗುರುವಾರ ಮಧ್ಯಾಹ್ನ 12 ರಿಂದ ಸಂಜೆ 6.30ರವರೆಗೆ ಲಯನ್ಸ್ ಕ್ವೆಸ್ಟ್ ಸ್ಪೀಚ್ & ಹೀಯರಿಂಗ್ ಸೆಂಟರ್, ೩ನೇ ಮುಖ್ಯರಸ್ತೆ, ನಾಡಿಗರ ಕಣ್ಣಿನ ಆಸ್ಪತ್ರೆ ಎದುರು, ೧ನೇ ಮಹಡಿ, ಪಿ.ಜೆ. ಬಡಾವಣೆ, ದಾವಣಗೆರೆಯಲ್ಲಿ ನಡೆಯಲಿದೆ. ಅಗತ್ಯವಿರುವ ಎಲ್ಲಾ ಸಾರ್ವಜನಿಕರು ಮೊಬೈಲ್ : 9743780492 ಕರೆ ಮಾಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್. ಓಂಕಾರಪ್ಪ ತಿಳಿಸಿದ್ದಾರೆ.



