ದಾವಣಗೆರೆ: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ರಾಷ್ಟ್ರೀಯ ಬಾಲಾಸ್ವಾಸ್ಥ್ಯ ಡಿ.ಇ.ಐ.ಸಿ ಕಾರ್ಯಕ್ರಮದಡಿ ಕೆ.ಬಿ.ಎಂ.ಐ.ಎಸ್.ಎಸ್ ರವರು ಸೀಳುತುಟಿ ಮತ್ತು ಸೀಳು ಅಂಗಳು, ಸೀಳು ಮುಖ ಹೊಂದಿದವರಿಗೆ ಉಚಿತ ಚಿಕಿತ್ಸೆ ನೀಡುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ. ಜಿಲ್ಲೆಯಾದ್ಯಾಂತ ಸೀಳುತುಟಿ ಮತ್ತು ಸೀಳು ಅಂಗಳು, ಸೀಳು ಮುಖ ಇರುವ ಮಕ್ಕಳನ್ನು ಚಿಗಟೇರಿ ಜಿಲ್ಲಾ ಆಸ್ಪತ್ರೆ, ಡಿ.ಇ.ಐ.ಸಿ ಕೇಂದ್ರದಲ್ಲಿ ನೋಂದಣಿ ಮಾಡಿಸಿ, ರಂಗಾದೊರೆ ಮೆಮೋರಿಯಲ್ ಆಸ್ಪತ್ರೆ, ಬಸವನಗುಡಿ, ಬೆಂಗಳೂರು ಇಲ್ಲಿ ಉಚಿತ ಶಸ್ತ್ರ ಚಿಕಿತ್ಸೆಯನ್ನು ಮಾಡಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



