ದಾವಣಗೆರೆ: ರಿಯಾಯಿತಿ ದರದಲ್ಲಿ ಆರೋಗ್ಯ ಸೇವೆ ಒದಗಿಸುತ್ತಿರುವ ಮಣಿಪಾಲ ಆರೋಗ್ಯ ಕಾರ್ಡ್-2025ರ ನೋಂದಣಿ ಪ್ರಾರಂಭವಾಗಿದೆ ಎಂದು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ವ್ಯವಸ್ಥಾಪಕ ಮೋಹನ್ ಶೆಟ್ಟಿ ಹೇಳಿದ್ದಾರೆ.
ಈ ಯೋಜನೆಯಡಿ 1 ವರ್ಷಕ್ಕೆ ಒಬ್ಬರಿಗೆ 350 ರೂ, ಸಂಗಾತಿ ಹಾಗೂ 25 ವರ್ಷದೊಳಗಿನ ಮಕ್ಕಳನ್ನು ಒಳಗೊಂಡಂತೆ ಕೌಟುಂಬಿಕ ಕಾರ್ಡಿಗೆ 700 ರೂ, ಸಂಗಾತಿ, ಮಕ್ಕಳು ಮತ್ತು ನಾಲ್ವರು ಪೋಷಕರನ್ನು ಒಳಗೊಂಡ ಕುಟುಂಬ ಪಸ್ಸ್‌ಗೆ 900 ರೂ. ನೋಂದಣಿ ಶುಲ್ಕ ಇರುತ್ತದೆ. 2 ವರ್ಷದ ಯೋಜನೆಯಲ್ಲಿ ಒಬ್ಬರಿಗೆ 600 ರೂ., ಕುಟುಂಬಕ್ಕೆ 950 ರೂ.ಹಾಗೂ ಕೌಟುಂಬಿಕ ಪ್ಲಸ್ ಯೋಜನೆಗೆ 1,100 ರೂ. ಶುಲ್ಕ ನಿಗದಿಪಡಿಸಲಾಗಿದೆ.
ರಿಯಾಯಿತಿ ಎಷ್ಟು..?
ಕಾರ್ಡ್‌ದಾರರು ತಜ್ಞ ಮತ್ತು ಸೂಪರ್ ಸ್ಪೆಷಲಿಸ್ಟ್ ಸಮಾಲೋಚನೆ ಶುಲ್ಕಗಳಲ್ಲಿ 50%, ರೋಗನಿರ್ಣಯ ಮತ್ತು ಪ್ರಯೋಗಾಲಯ ಪರೀಕ್ಷೆಗಳ ಮೇಲೆ 25%, ರೇಡಿಯಾಲಜಿ, ಒಪಿಡಿ ಕಾರ್ಯವಿಧಾನ ಹಾಗೂ ಮಧುಮೇಹ ಪಾದದ ಆರೈಕೆ ಮೇಲೆ 20%, ಡಯಾಲಿಸಿಸ್‌ನಲ್ಲಿ 100%, ಆಸ್ಪತ್ರೆ ಔಷಧಿಗಳ ಮೇಲೆ 10% ವರೆಗೆ ಹಾಗೂ ಸಾಮಾನ್ಯ ವಾರ್ಡ್ ಒಳರೋಗಿ ಬಿಲ್‌ಗಳಲ್ಲಿ 25% ರಿಯಾಯಿತಿ ಪಡೆಯಬಹುದು ಎಂದು ತಿಳಿಸಿದರು.
ಎಲ್ಲೆಲ್ಲಿ ಸೌಲಭ್ಯ..?
ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ, ಉಡುಪಿಯ ಡಾ.ಟಿ.ಎಂ.ಎ ಪೈ ಆಸ್ಪತ್ರೆ, ಕಾರ್ಕಳದ ಡಾ.ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ, ಮಗಳೂರು ಮತ್ತು ಅತ್ತಾವರದ ಕೆ.ಎಂ.ಸಿ ಆಸ್ಪತ್ರೆ, ಕಟೀಲು ಮಣಿದುರ್ಗಾ ಸಂಜೀವನಿ ಆಸ್ಪತ್ರೆ, ಗೋವಾ ಮಣಿಪಾಲ ಆಸ್ಪತ್ರೆ, ಮಂಗಳೂರಿನಲ್ಲಿನ ದಂತ ಕಾಲೇಜುಗಳಲ್ಲಿ ಪ್ರಯೋಜನ ಪಡೆಯಲು ಕಾರ್ಡ್ ಅನ್ವಯ ಆಗುತ್ತದೆ. ಹೆಚ್ಚಿನ ಮಾಹಿತಿಗೆ ದೂ: 99808 54700, 08202-923748 ಹಾಗೂ ಕಾರ್ಡ್ ನೋಂದಣಿ ಅರ್ಜಿಗಳಿಗಾಗಿ ಮೊ: 97317 09177, 89042 19373, 93537 20350 ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಆಸ್ಪತ್ರೆಯ ಮಾರುಕಟ್ಟೆ ವಿಭಾಗದ ಪ್ರತಿನಿಧಿ ಅನಿಲ್, ಕೆ.ಬಿ.ಕೆಂಚನಗೌಡ, ಮನೋಜ್ ಕುಮಾರ್, ಹಿರಿಯ ಪತ್ರಕರ್ತ ಆರ್.ಎಸ್. ತಿಪ್ಪೇಸ್ವಾಮಿ ಇತರರು ಇದ್ದರು.