ದಾವಣಗೆರೆ: ಜಿಲ್ಲಾ ಪೊಲೀಸ್ ಹಾಗೂ ಎಸ್ ಎಸ್ ಕೇರ್ ಟ್ರಸ್ಟ್ ವತಿಯಿಂದ ದಾವಣಗೆರೆಯ ಎಲ್ಲಾ ವಾಹನ ಚಾಲಕರುಗಳಿಗೆ (ಬಸ್, ಲಾರಿ, ಅಂಬ್ಯುಲೆನ್ಸ್, ಆಟೋ, ಟ್ರಕ್, ಟ್ಯಾಕ್ಸಿ ಚಾಲಕರಿಗೆ)ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಪಿ.ಜೆ.ಬಡಾವಣೆಯಲ್ಲಿರುವ ಡಿಎಆರ್ ಕಛೇರಿಯ ಆವರಣದಲ್ಲಿರುವ ಪೊಲೀಸ್ ಸಾಂಸ್ಕೃತಿಕ ಭವನದಲ್ಲಿ ಜ.13 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 03 ರವರೆಗೆ ಶಿಬಿರ ನಡೆಯಲಿದೆ.
ಶಿಬಿರದಲ್ಲಿ ವೈದ್ಯರು, ನೇತ್ರಶಾಸ್ತ್ರಜ್ಞರು, ಮೂಳೆ ತಜ್ಞರು, ಚರ್ಮರೋಗ ತಜ್ಞರು ಮತ್ತು ಶ್ವಾಸಕೋಶ ಶಾಸ್ತ್ರಜ್ಞರು ಆರೋಗ್ಯ ತಪಾಸಣೆಗೆ ಲಭ್ಯವಿರುರುತ್ತಾರೆ. ರಕ್ತದ ಸಕ್ಕರೆಯ ಅಂದಾಜು, ರಕ್ತದೊತ್ತಡ ಮಾಪನ, ಇಸಿಜಿ ಮತ್ತು ಉಚಿತ ಔಷಧಗಳನ್ನು ಶಿಬಿರದಲ್ಲಿ ಒದಗಿಸಲಾಗುವುದು. ಶಿಬಿರದಲ್ಲಿ ಪ್ರಥಮ ಚಿಕಿತ್ಸೆ, ಅಪಘಾತಗಳು ಮತ್ತು ತುರ್ತು ಪರಿಸ್ಥಿತಿಗಳ ಕುರಿತು ಆರೋಗ್ಯ ಶಿಕ್ಷಣವನ್ನು ನೀಡಲಾಗುತ್ತದೆ. ಚಾಲಕರು ಈ ಸೇವೆ ಸದುಪಯೋಗಪಡಿಸಿಕೊಳ್ಳಲು ಕೋರಲಾಗಿದೆ.



