ದಾವಣಗೆರೆ: ಜಿಲ್ಲೆಯ ಹರಿಹರ ನಗರದಲ್ಲಿ ಔಷಧಿ ತುಂಬಿಕೊಂಡು ಹೋಗುವ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಬೃಹತ್ ಗಾತ್ರದ ಚರಂಡಿಗೆ ಬಿದ್ದ ಘಟನೆ ನಡೆದಿದೆ. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಈ ಘಟನೆ ಹರಿಹರ ನಗರದ ಹಳೆಯ ಪಿಬಿ ರಸ್ತೆಯ ಗೋಪಾಲಕೃಷ್ಣ ಲಾಡ್ಜ್ ಬಿಲ್ಡಿಂಗ್ ಮುಂಭಾಗದಲ್ಲಿ ನಡೆದಿದೆ. ಇಂದು (ಜ.20) ಬೆಳಗ್ಗೆ ಔಷಧಿ ತುಂಬಿಕೊಂಡು ಹೋಗುತ್ತಿದ್ದ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದದೆ. ಈ ಅಪಘಾತದಲ್ಲಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ವಾಹನವು ಮುಂಭಾಗವು ಜಖಂಗೊಂಡಿದೆ. ಹಳೆ ಪಿಬಿ ರಸ್ತೆ ಚರಂಡಿ ಕಾಮಗಾರಿಗಳು ಅಪೂರ್ಣಕೊಂಡು ಸುಮಾರು ವರ್ಷಗಳೇ ಕಳೆದಿವೆ.
ಇಂತಹ ಅಪಘಾತಗಳು ಪದೇ ಪದೇ ಮರುಕಳಿಸುತ್ತಿದ್ದು, ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷವೇ ಕಾರಣ ಸ್ಥಳೀಯರು ಆರೋಪಿಸಿದ್ದಾರೆ. ಈ ರೀತಿಯ ಅವಘಡ ಇನ್ನಷ್ಟು ಆಗುವ ಮುನ್ನವೇ ಅಪೂರ್ಣಗೊಂಡ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಸಾರ್ವಜನಿಕರಉ ಆಗ್ರಹಿಸಿದ್ದಾರೆ.



