ಇನ್ಮುಂದೆ ಹರಿಹರ ಎಂ.ಜಿ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿದ್ರೆ ಬೀಳುತ್ತೆ ದಂಡ; ಎಸ್ಪಿ ಎಚ್ಚರಿಕೆ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
3 Min Read

ದಾವಣಗೆರೆ: ಇನ್ಮುಂದೆ ಹರಿಹರ ಎಂ.ಜಿ ವೃತ್ತದ ಟ್ರಾಫಿಕ್ ಸಿಗ್ನಲ್ ಜಂಪ್ ಅಥವಾ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ರೆ, ಸಿಸಿಕ್ಯಾಮಾರಾ ಫೋಟೋ ಆಧಾರಿಸಿ ಪ್ರಕರಣಗಳನ್ನು ದಾಖಲು ಮಾಡಲಾಗುವುದು ಎಂದು ಎಸ್ಪಿ ಉಮಾ ಪ್ರಶಾಂತ್ ಎಚ್ಚರಿಕೆ ನೀಡಿದ್ದಾರೆ.

ದಾವಣಗೆರೆ ಜಿಲ್ಲೆ ಹರಿಹರ ತಾಲೂಕು ಹರಿಹರ ಪಟ್ಟಣದ ಎಂ.ಜಿ ವೃತ್ತದಲ್ಲಿರುವ ಸೋಲಾರ್ ಟ್ರಾಫಿಕ್ ಸಿಗ್ನಲ್ ಕಾರ್ಯ ನಿರ್ವಹಿಸದೇ ಬಹಳ ದಿನಗಳಿಂದ ಚಾಲನೆಯಲ್ಲಿ ಇರಲಿಲ್ಲ. ಇದನ್ನು ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಈ ಹಿಂದೆ ಭೇಟಿ ನೀಡಿದ ಸಮಯದಲ್ಲಿ ನಗರದ ನಾಗರಿಕರು ಮೌಖಿಕ ಮನವಿ ಮಾಡಿದ ಹಿನ್ನಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಕ್ರಮವನ್ನು ಕೈಗೊಳ್ಳಲು ಸೂಚಿಸಲಾದ ಹಿನ್ನಲೆಯಲ್ಲಿ ಎಂ.ಜಿ.ವೃತ್ತದಲ್ಲಿ ಇರುವ ಸಿಗ್ನಲ್‌ನ್ನು ಶೀಘ್ರದಲ್ಲಿಯೇ ಸಂಬಂಧಪಟ್ಟ ಸಂಸ್ಥೆಯವರನ್ನು ಕರೆಸಿ ರಿಪೇರಿ ಕಾರ್ಯವನ್ನು ಮಾಡಿಸಲಾಗಿರುತ್ತದೆ. ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಈ ಕೆಳಕಂಡ ಕ್ರಮಗಳನ್ನು ಅನುಸರಿಸಲಾಗುತ್ತದೆ.

  • ಎಂ.ಜಿ ವೃತ್ತದಲ್ಲಿ ಇನ್ನು ಮುಂದೆ ಯಾವುದೇ ವಾಹನ ಸವಾರ ಸಿಗ್ನಲ್ ಜಂಪ್ ಮಾಡುವುದಾಗಲಿ ಅಥವಾ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡಲಾದ ವಾಹನ ಸವಾರರ ಮೇಲೆ ಪ್ರಕರಣಗಳನ್ನು ದಾಖಲು ಮಾಡಲಾಗುವುದು
  • ಎಂ.ಜಿ ವೃತ್ತದ ಎಲ್ಲಾ ರಸ್ತೆಗಳ ಎಡ ಮುಕ್ತ (ಫ್ರೀ ಲೆಫ್ಟ್) ತಿರುವುಗಳಲ್ಲಿ ಪಾದಚಾರಿ ವ್ಯಾಪಾರಿಗಳು ವ್ಯಾಪಾರ ಮಾಡುವುದನ್ನು ನಿಷೇಧಿಸಲಾಗಿದೆ
  • ಎಂ.ಜಿ ವೃತ್ತದಲ್ಲಿನ ಟ್ರಾಫಿಕ್ ಸಿಗ್ನಲ್ ವೃತ್ತದಲ್ಲಿ ಇನ್ನು 15 ದಿನಗಳ ಒಳಗಾಗಿ ಪಿ.ಡಬ್ಲೂö್ಯ.ಡಿ ಇಲಾಖೆಯವತಿಯಿಂದ ಪಾದಚಾರಿ ಮಾರ್ಗ ಮಾರ್ಕಿಂಗ್ & ಸ್ಟಾಫ್ ಲೈನ್ ಮಾರ್ಕಿಂಗ್‌ನ್ನು ಮಾಡಿಸಲಾಗುವುದು
  • ಇನ್ನು ಮುಂದೆ ಎಂ.ಜಿ ಸರ್ಕಲ್ ನಲ್ಲಿ ಹರಿಹರ ನಗರ ಠಾಣೆಯವತಿಯಿಂದ ಸಂಚಾರ ನಿರ್ವಹಣೆ ಕರ್ತವ್ಯಕ್ಕೆ 03 ಜನ ಸಿಬ್ಬಂದಿಯನ್ನು ನೇಮಕ ಮಡಲಾಗುವುದು
  • ನಗರ ಸಭೆಯ ವತಿಯಿಂದ ವೃತ್ತವು ದೊಡ್ಡ ಪ್ರಮಾಣದಲ್ಲಿ ಇರುವ ಕಾರಣ ವಾಹನಗಳು ನೇರವಾಗಿ ಹಾದು ಹೋಗುವುದನ್ನು ತಡೆಯಲು ಹಾಗೂ ಅಪಘಾತಗಳಿಗೆ ಕಡಿವಾಣ ಹಾಕಲು ಹರಿಹರ ನಗರ ಪಕ್ಕದಲ್ಲಿಯೇ ಹಾದು ಹೋಗಿರುವ ತುಂಗಭದ್ರ ನದಿಯ ಸಂಕೇತವಾಗಿ ಈ ಹಿಂದೆ ನಗರಸಭೆಯಲ್ಲಿ ಚರ್ಚಿಸಿದಂತೆ ವೃತ್ತದ ಮಧ್ಯಭಾಗದಲ್ಲಿ ಒಂದು ವೃತ್ತಾಕಾರದ ನೀರಿನ ಕಾರಂಜಿಯನ್ನು ಮಾಡಲು ನಗರಸಭೆಯ ಮುಖಾಂತರ ಸರ್ಕಾರಕ್ಕೆ ಒಂದು ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು
  • ಈ ವೃತ್ತದಲ್ಲಿ ಪಾದಚಾರಿಗಳು ಪಾದಚಾರಿ ಮಾರ್ಗದಲ್ಲಿಯೇ ರಸ್ತೆಯನ್ನು ದಾಟಲು ಸೂಕ್ತ ಕ್ರಮಗಳನ್ನು ಅನುಸರಿಸಲಾಗುವುದು
  • ಹರಿಹರ ನಗರಸಭೆಯವತಿಂದ ಎಂ.ಜಿ ವೃತ್ತದಲ್ಲಿ ನಗರದ ನಾಗರಿಕರಿಂದ ಪ್ರತಿದಿನ ಸ್ವಚ್ಛತೆಯಿಂದ ಕೂಡಿರಲು & ಸ್ವಚ್ಛತೆಯನ್ನು ಕಾಯ್ದುಕೊಳ್ಳಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಹಾಗೂ ಅನುಸರಿಸಲು ಸಹಯೋಗದೊಂದಿಗೆ ಅಭಿಯಾನಗಳನ್ನು ನಡೆಸಿಕೊಡಲಾಗುವುದು
  • ಪ್ರತಿ ದಿನ ಈ ವೃತ್ತದಲ್ಲಿ ಶಾಲಾ-ಕಾಲೇಜು ಮಕ್ಕಳು ಪಾದಚಾರಿ ಮಾರ್ಗದಲ್ಲಿಯೇ ರಸ್ತೆಯನ್ನು ದಾಟಲು ಸಂಚಾರ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು
  • ಈ ವೃತ್ತದಲ್ಲಿ ಯಾವುದೇ ಪ್ರಯಾಣಿ ವಾಹನಗಳ ಚಾಲಕರು ಹತ್ತಿಸಿಕೊಳ್ಳುವುದಾಗಲಿ ಅಥವಾ ಇಳಿಸುವುದಾಗಲಿ ಮಾಡುವಂತಹ ವಾಹನ ಚಾಲಕರ ಮೇಲೆ ಪ್ರಕರಣಗಳನ್ನು ದಾಖಲಿಸಲಾಗುವುದು
  • ಈ ವೃತ್ತದ ಸಮೀಪ ಇರುವ ಆಟೋರಿಕ್ಷಾ ನಿಲ್ದಾಣವನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗುವುದು
  • ಒಟ್ಟಾರೆ ಹರಿಹರ ನಗರದ ಪ್ರಮುಖ ರಸ್ತೆಯ ವೃತ್ತಗಳಲ್ಲಿ ಸುಗಮ ಸಂಚಾರಕ್ಕೆ ಅಡಚಣೆ ಆಗುವಂತೆ ಬ್ಯಾನರ್ & ಪಾದಚಾರಿ ಮಾರ್ಗವನ್ನು ಬಳಕೆ ಮಾಡಿಕೊಳ್ಳುವವರ ಮೇಲೆ ನಗರಸಭೆ ಹಾಗೂ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು
  • ಈ ವೃತ್ತದ 50 ಮೀಟರ್ ವ್ಯಾಪ್ತಿಯವರೆಗೆ ಮೊದಲನೇ ಹಂತದಲ್ಲಿ ಕ್ರಮಬದ್ಧವಾಗಿ ವಾಹನ ನಿಲುಗಡೆ ಮಾಡುವಂತೆ ಸೂಕ್ತ ಕ್ರಮಗಳನ್ನು ಮಾಡಲಾಗುವುದು
  • ಈ ವೃತ್ತದಲ್ಲಿ ಅಳವಡಿಲಾದ ಕ್ಯಾಮೇರಾಗಳ ಮುಖಾಂತರ ಹಾಗೂ ಸಂಚಾರ ಸಿಬ್ಬಂದಿಯವರು ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡಲಾದ ಪೋಟೋಗಳನ್ನು ತಗೆದು ಪ್ರಕರಣಗಳನ್ನು ದಾಖಲು ಮಾಡಿ, ಈ-ಚಲನ್ ಮುಖಾಂತರ ದಂಡವನ್ನು ಪೊಲೀಸ್ ಕಮಾಂಡ್ ಕಂಟ್ರೋಲ್ ಸೆಂಟರ್ ಮುಖಾಂತರ ಸಂಬಂಧಪಟ್ಟ ವಾಹನ ಮಾಲೀಕರಿಗೆ ನೋಟಿಸ್‌ಗಳನ್ನು ನೀಡಲಾಗುವುದು.
Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *