ದಾವಣಗೆರೆ: ಹರಿಹರ ನಗರಸಭೆ ವ್ಯಾಪ್ತಿಯ ಆಸ್ತಿ ತೆರಿಗೆ 2022-23ನೇ ಸಾಲಿನ ಆರ್ಥಿಕ ವರ್ಷ ಏ.01 ರಿಂದ ಪ್ರಾರಂಭವಾಗಿದ್ದು, ಶೇ.03ರಷ್ಟು ಏರಿಕೆ ಮಾಡಲಾಗಿದೆ. ಏ. 30 ರೊಳಗೆ ಆಸ್ತಿ ತೆರಿಗೆ ಪಾವತಿಗೆ 05 ರಷ್ಟು ರಿಯಾಯಿತಿ ನೀಡಲಾಗುವುದು.
ಮೇ.01 ರಿಂದ ಜೂನ್.30 ರೊಳಗೆ ದಂಡ ರಹಿತವಾಗಿ ಆಸ್ತಿ ತೆರಿಗೆಯನ್ನು ಪಾವತಿಸಬೇಕು. ತಪ್ಪಿದಲ್ಲಿ ಜುಲೈ.07 ರಿಂದ ಪ್ರತಿ ಮಾಹೆ ಶೇ 02 ರಷ್ಟು ದಂಡ ವಿಧಿಸಲಾಗುವುದು. ಹೀಗಾಗಿ ಹರಿಹರ ನಗರಸಭೆ ವ್ಯಾಪ್ತಿಯಲ್ಲಿನ ಸಾರ್ವಜನಿಕರು ತಮ್ಮ ಆಸ್ತಿಗೆ ಸಂಬಂಧಿಸಿದ ಆಸ್ತಿ ತೆರಿಗೆ, ನೀರಿನ ತೆರಿಗೆ, ಮಳಿಗೆ ಬಾಡಿಗೆ, ಟ್ರೇಡ್ ಲೈಸೆನ್ಸ್ ಶುಲ್ಕ, ಜಾಹೀರಾತು ಶುಲ್ಕಗಳನ್ನು ಪಾವತಿಸಿ ಆಸ್ತಿ ತೆರಿಗೆಯ ಮೇಲೆ ರಿಯಾಯಿತಿಯ ಹಾಗೂ ದಂಡ ರಹಿತದ ಸದುಪಯೋಗ ಪಡೆದುಕೊಳ್ಳಬಹುದು. ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು, ಬೆಂಗಳೂರು ಇವರು ಪ್ರಸ್ತುತ ವರ್ಷದ ಆಸ್ತಿ ತೆರಿಗೆಯನ್ನು ಶೇಕಡಾ 03 ರಷ್ಟು ಹೆಚ್ಚಿಸಿ ಪರಿಷ್ಕರಿಸಿ ಸುತ್ತೋಲೆ ಹೊರಡಿಸಿದ್ದು, ಮೊತ್ತವನ್ನು ಯಾವುದೇ ಮೂರನೇ ವ್ಯಕ್ತಿಗೆ ನೀಡದೆ ಸಾರ್ವಜನಿಕರು ಸಹಕರಿಸಿ ನಗರಸಭೆಗೆ ಪಾವತಿಸುವ ಬಿಲ್ಲು ಮೊತ್ತವನ್ನು ಸ್ವೀಕೃತಿ ಚಲನ್ ಪಡೆದು, ಬ್ಯಾಂಕ್‍ನಲ್ಲಿ ಪಾವತಿಸುವಂತೆ ಹರಿಹರ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



