ಹರಿಹರ: ಪಶು ಸಂಗೋಪನ ಇಲಾಖೆ ವತಿಯಿಂದ ವಿವಿಧ ಯೋಜನೆಯಡಿಯ ಫಲಾನುಭವಿಗಳಿಗೆ ನಗರದ ಪಶು ಆಸ್ಪತ್ರೆಯಲ್ಲಿ ಪಶು ಮ್ಯಾಟ್ ಸೇರಿ ವಿವಿಧ ಸಾಮಗ್ರಿಗಳನ್ನು ಶಾಸಕ ಬಿ.ಪಿ ಹರೀಶ್ ವಿತರಿಸಿದರು.
ಯೋಜನೆಗಳ ಬಗ್ಗೆ ಸೂಕ್ತ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸುವುದು ಇಲಾಖೆಯ ಮೂಲ ಕರ್ತವ್ಯವಾಗಿರುತ್ತದೆ ಎಂದು ಸಹಾಯಕ ನಿರ್ದೇಶಕರಿಗೆ ಶಾಸಕರು ಸೂಚಿಸಿದರು. ಈ ಕಾರ್ಯಕ್ರಮದಲ್ಲಿ ತಾಲೂಕು ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ, ನಗರಸಭೆ ಸದಸ್ಯ ಆಟೋ ಹನುಮಂತಣ್ಣ, ಆಸ್ಪತ್ರೆಯ ವೈದ್ಯರು, ಫಲಾನುಭವಿಗಳು ಹಾಜರಿದ್ದರು.