ದಾವಣಗೆರೆ: ಜಿಲ್ಲೆಯ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಪಟ್ಟಣದ ಶ್ರೀ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆಯು ಅ.2ರಂದು ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 10ವರೆಗೆ ನಡೆಯಲಿದ್ದು, ಮರವಣಿಗೆ ಪಟ್ಟಣದ ಶಿವಮೊಗ್ಗ-ಹರಿಹರ ರಸ್ತೆಯಲ್ಲಿ ನಡೆಯಲಿದೆ. ಹೀಗಾಗಿ ಅಂದು ಮಾರ್ಗ ಬದಲಾವಣೆ ಮಾಡಿ ಜಿಲ್ಲಾ ಪೊಲೀಸ್ ಆದೇಶ ಹೊರಡಿಸಿದೆ.
ಗಣಪತಿ ವಿಸರ್ಜನೆಗೆ ಪೊಲೀಸ್ ಅಧೀಕ್ಷಕರ
ನೇತೃತ್ವದಲ್ಲಿ ಡಿವೈಎಸ್ಪಿ-01, ಸಿಪಿಐ-06, ಪಿಎಸ್‌ಐ-14, ಎಎಸ್‌ಐ-25, ಸಿಹೆಚ್‌ಸಿ/ಸಿಪಿಸಿ-201, ಕೆಎಸ್‌ಆರ್‌ಪಿ-01,
ಡಿಎಆರ್-02 ತುಕುಡಿ ಮತ್ತು ಸಿ.ಸಿ ಕ್ಯಾಮೆರಾಗಳು ಮತ್ತು ವಿಡಿಯೋ ಚಿತ್ರೀಕರಣಗಳನ್ನು ಬಳಸಿಕೊಂಡು ಬಂದೋಬಸ್ತ್
ಕೈಗೊಳ್ಳಲಾಗಿರುತ್ತದೆ. ಅಂದು ಬೆಳಿಗ್ಗೆ 10-00 ಗಂಟೆಯಿಂದ ರಾತ್ರಿ 10-00 ಗಂಟೆವರೆಗೆ ಮಾರ್ಗ ಬದಲಾವಣೆ ಮಾಡಲಾಗಿದೆ.
- ಹೊನ್ನಾಳಿಯಿಂದ ಹರಿಹರಕ್ಕೆ ಹೋಗುವ ವಾಹನಗಳು ಕೊಮಾರನಹಳ್ಳಿ ಚಾನಲ್ ಮೂಲಕ, ಗುಡ್ಡದ ಬೇವಿನಹಳ್ಳಿ ಗ್ರಾಮ- ಜಿಗಳಿ – ಕುಂಬಳೂರು ಮಾರ್ಗವಾಗಿ ಹರಿಹರಕ್ಕೆ ಹೋಗುವುದು
- ಹರಿಹರದಿಂದ ಹೊನ್ನಾಳಿಗೆ ಹೋಗುವ ವಾಹನಗಳು ಕುಂಬಳೂರು ಗ್ರಾಮದ ಮೂಲಕ ನಿಟ್ಟೂರು – ಹರಳಹಳ್ಳಿ – ಹಾಲಿವಾಣ – ಕೊಮಾರನಹಳ್ಳಿ ಕೆರೆ ಏರಿಯ ಮೂಲಕ ಹೊನ್ನಾಳಿ ಕಡೆಗೆ ಹೋಗಲ ಮಾರ್ಗ ಬದಲಾವಣೆ ಮಾಡಲಾಗಿರುತ್ತದೆ
ದಾವಣಗೆರೆ: ಭೂ ಪರಿವರ್ತನೆಗೆ 1.50 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ತಾ. ಪಂ. ಇಒ, ಗ್ರಾ.ಪಂ ಪಿಡಿಒ
ಸಾಹಿತಿಗಳಿಗೆ ಬೆದರಿಕೆ ಪತ್ರ; ಬಂಧಿತ ಆರೋಪಿ ದಾವಣಗೆರೆ ನಿವಾಸದಲ್ಲಿ ಮಹಜರ್



