ಹರಿಹರ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಸಿಗೋವರೆಗೂ ಪೀಠರೋಹಣ, ತುಲಾಭಾರ ಮಾಡಿಸಿ ಕೊಳ್ಳುವುದಿಲ್ಲ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು ಘೋಷಿಸಿದರು. ಇನ್ನೊಂದೆಡೆ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಶಾಮನೂರು ಶಿವಶಂಕರಪ್ಪ, ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಮಹಾಸಭಾ ಬೆಂಬಲ ನೀಡಿದೆ ಎಂದರು.
ಮಠದ ಅವರಣದಲ್ಲಿ ನಡೆದ ಹರಜಾತ್ರಾ ಮಹೋತ್ಸವದ ಪೀಠಾರೋಹಣ ಸಮಾರಂಭದಲ್ಲಿ ನಡೆಯಿತು ಈ ಪ್ರಸಂಗ ನಡೆಯಿತು. 2ಎ ಮೀಸಲಾತಿಯಿಂದ ಬಡ ಮಕ್ಕಳಿಗೆ ಶಿಕ್ಷಣ, ಉದ್ಯೋಗಕ್ಕೆ ಅನುಕೂಲವಾಗುತ್ತದೆ. ಕೃಷಿಕರೇ ಹೆಚ್ಚುರುವ ನಮ್ಮ ಸಮಾಜದ ದಶಕಗಳ ಮೀಸಲಾತಿ ಬೇಡಿಕೆ ಈಡೇರದ ಕಾರಣ ಪೀಠಾರೋಹಣ ಮಾಡುವುದಿಲ್ಲ ಎಂದು ಶ್ರೀಗಳು ಹೇಳಿದರು.
ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಶಾಮನೂರು ಶಿವಶಂಕರಪ್ಪ, ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಮಹಾಸಭಾ ಬೆಂಬಲವಿದೆ. ಸರಕಾರ ಈ ವಿಷಯದಲ್ಲಿ ಸುಮ್ಮನೆ ಕುಳಿತಿಲ್ಲ. ಯಾರೂ ಸಂಯಮ ಕಳೆದುಕೊಳ್ಳಬಾರದೆಂದು.ಜಾತಿಗೊಂದು ಮಠ, ಮಠಾಧೀಶರು ಆಗಿದ್ದರಿಂದ ವಾತಾವರಣ ಗೊಂದಲಮಯವಾಗಿದೆ ಎಂದರು.
ಪಂಚಮಸಾಲಿ ಮೀಸಲಾತಿ ವಿಷಯದಲ್ಲಿ ಯತ್ನಾಳ್ ಒಂದು ಮಾತನಾಡಿದರೆ, ಇನ್ನೊಬ್ಬರು ಇನ್ನೊಂದು ಮಾತನಾಡುತ್ತಾರೆ. ಇಂತಹ ಗೊಂದಲಗಳಿಂದ ಏನು ಪ್ರಯೋಜನ ಇಲ್ಲ. ಬಸವಣ್ಣನವರ ತತ್ವ ಆಧರಿಸಿ ಎಲ್ಲರೂ ಒಂದಾಗಬೇಕು. ಪೀಠಾರೋಹಣ ಮಾಡದಿದ್ದರೆ ಭಕ್ತರಿಗೆ ನೋವಾಗುತ್ತದೆ, ಬೇಡಿಕೆಗಳು ಈಡೇರುತ್ತವೆ. ತಾವು ಪೀಠಾರೋಹಣ ನಿರಾಕರಣೆ ಮರು ಪರಿಶೀಲಿಸಿ ಎಂದರು.



